ಮಡಿಕೇರಿ ಜ.18 : ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 11 ನೇ ಕನ್ನಡ ಸಾಹಿತ್ಯ ಸಮ್ಮೇಳನ ಬೆಟ್ಟಗೇರಿಯಲ್ಲಿ ನಡೆಯಲಿದೆ. ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರತರಲು ನಿರ್ಧರಿಸಲಾಗಿದ್ದು, ಸಂಚಿಕೆಗೆ ಲೇಖನ ಆಹ್ವಾನಿಸಲಾಗಿದೆ.
ಮಡಿಕೇರಿ ತಾಲೂಕು ವ್ಯಾಪ್ತಿಯ ಸಾಹಿತಿಗಳು, ಲೇಖಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಕತೆ, ಕವನ, ಚುಟುಕ, ಒಗಟು, ಗಾದೆ, ನಾಟಿ ಔಷಧಿ, ವೈಚಾರಿಕ ಲೇಖನ., ನಾಡಿನ ಐತಿಹಾಸಿಕ ಹಿನ್ನೆಲೆಗಳ ಬಗ್ಗೆ ಬರೆದು ಕಳುಹಿಸಬಹುದಾಗಿದೆ. ಲೇಖನಗಳು ಕೈಬರಹವಾದರೆ ಒಂದೇ ಮಗ್ಗುಲಲ್ಲಿ ಮೂರು ಪುಟ, ಡಿಟಿಪಿ ಆದರೆ ಎರಡು ಪುಟಗಳು, ಕವನಗಳು 20 ಸಾಲುಗಳನ್ನು ಮೀರಬಾರದು.
ಲೇಖನಗಳನ್ನು ಸಂಪಾದಕರು, ಸ್ಮರಣ ಸಂಚಿಕೆ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ, ಸಾಮಥ್ರ್ಯ ಸೌಧ ಭವನ, ಫೀ.ಮಾ.ಕಾರ್ಯಪ್ಪ ವೃತ್ತ, ಮಡಿಕೇರಿ, ಇಲ್ಲಿಗೆ, ಅಥವಾ kudekalsanthu@gmail.com ಗೆ ಇಮೇಲ್ ಮುಖಾಂತರ, ಇಲ್ಲವೇ 8672110948, 9535615759 ಈ ಸಂಖ್ಯೆಗಳಿಗೆ ವ್ಯಾಟ್ಸಪ್ ಮಾಡಬಹುದಾಗಿದೆ. ಲೇಖನಗಳನ್ನು ಕಳುಹಿಸಲು ಜನವರಿ, 25 ಕೊನೆಯ ದಿನವಾಗಿದೆ. ಸಂಪಾದಕೀಯ ಮಂಡಳಿಯಲ್ಲಿ ಆಯ್ಕೆಯಾಗುವ ಅರ್ಹ ಲೇಖನಗಳನ್ನು ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.9972538584, 9449035449 ಸಂಪರ್ಕಿಸಬಹುದು ಎಂದು ಸಂಚಿಕೆ ಸಮಿತಿ ಸಂಪಾದಕ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.









