ವಿರಾಜಪೇಟೆ ಜ.21 : ಗಡಿನಾಡು ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಅಕ್ಷರ ಜಾತ್ರೆಗೆ ಅಣಿಯಾಗಿದೆ. ಒಂಬತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣ ಹಾಗೂ ಗ್ರಾಮದ ಮುಖ್ಯರಸ್ತೆಗಳು ನವ ವಧುವಿನಂತೆ ಸಿಂಗಾರಗೊಂಡಿದೆ. ಸಮ್ಮೇಳನದ ಸರ್ವಾಧ್ಯಕ್ಷ ಡಾ. ಎಸ್.ವಿ ನರಸಿಂಹನ್ ಸಾರಥ್ಯದ ನುಡಿ ಜಾತ್ರೆಗೆ ಕಸಾಪ, ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ.
ಅದ್ದೂರಿ ಮೆರವಣಿಗೆ ನಡೆಯಲಿದೆ. ಇದಕ್ಕೆ ಕಲಾತಂಡಗಳ ಸಾಥ್ ನೀಡಲಿದೆ. ಈ ವರ್ಣರಂಜಿತ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೋಲಾಟ, ಮಂಗಳವಾದ್ಯ, ಚಂಡೆ, ಕಳಸಗಳು, ಕಂಸಾಳೆ, ಪೂಜಾ ಕುಣಿತ, ನಂದಿ ಧ್ವಜ, ದಫ್, ಕೊಡಗಿನ ವಾ¯ಗ, ಬ್ಯಾಂಡ್ ಸೆಟ್, ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ.
ಗ್ರಾಮದಲ್ಲಿ ಹಬ್ಬದ ವಾತಾವರಣ ತುಂಬಿದ್ದು ಗ್ರಾಮದ ರಸ್ತೆಗಳು ಕಳೆದುಂಬಿ, ಕನ್ನಡದ ಧ್ವಜಗಳು ಹಾರಾಡುತ್ತಿವೆ. ರಸ್ತೆಗಳ ಅಕ್ಕಪಕ್ಕ ಹಾಗೂ ವೇದಿಕೆ ಬಳಿ ಬ್ಯಾನರ್, ಬಂಟಿಗ್ಸ್ ರಾರಾಜಿಸಿ ಗ್ರಾಮ ಕನ್ನಡಮಯವಾಗಿ ಕಂಗೊಳಿಸಿವೆ.
ಸಾವಿರ ಆಸನ:
ಸಮ್ಮೇಳನಕ್ಕಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಭಾಂಗಣ ಸಿದ್ಧಗೊಂಡಿದೆ. ವೇದಿಕೆಯ ಮೇಲೆ ಗಣ್ಯರಿಗೆ ಸುಮಾರು ಆಸನಗಳ ವ್ಯವಸ್ಥೆ ಮಾಡಿದ್ದು, ವೇದಿಕೆಯ ಮುಂಭಾಗ ಒಂದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಊಟದ ವ್ಯವಸ್ಥೆ: ಸಮ್ಮೇಳನಕ್ಕೆ ಬರುವ ಸಾಹಿತ್ಯಾಭಿಮಾನಿಗಳಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಊಟದ ಸರ್ವೀಸ್‍ಗೆ ಸ್ವಯಂ ಸೇವಕರ ಪಡೆ ಸಿದ್ಧವಾಗಿದೆ.
:: ಕಾರ್ಯಕ್ರಮದ ವಿವರ ::
ಜ.21 ರಂದು ಬೆಳಿಗ್ಗೆ 7.30 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಬಿ. ಪಾರ್ವತಿ, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಜೆ. ಯಶೋಧ ನೆರವೇರಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ತಾಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ ಹಾಗೂ ಕನ್ನಡ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷ ಎಂಪಿ ಕೇಶವ ಕಾಮತ್ ನೆರವೇರಿಸಲಿದ್ದಾರೆ.
ಅಂದು ಬೆಳಿಗ್ಗೆ 8 ಗಂಟೆಗೆ ಏಕಕಾಲದಲ್ಲಿ ದ್ವಾರಗಳ ಉದ್ಘಾಟನೆ ನಡೆಯಲಿದೆ. ಕೋದಂಡ ಲೆಫ್ಟಿನೆಂಟ್ ಜನರಲ್ ಕೋದಂಡ ನಂಜಪ್ಪ ಸೋಮಣ್ಣ ದ್ವಾರವನ್ನು ಬೇಟೋಳಿ ಪಂಚಾಯಿತಿ ಸದಸ್ಯ ಟಿ. ಜೋಸೇಫ್, ಆರ್ಜಿ ಪಂಚಾಯಿತಿ ಸದಸ್ಯೆ ಫಾತೀಮಾ ಉದ್ಘಾಟಿಸಲಿದ್ದಾರೆ.
ಮೇಜರ್ ಜನರಲ್ ಸೋಮೆಯಂಡ ಕಾಳಪ್ಪ ಕಾರ್ಯಪ್ಪ (ಪೆರುಂಬಾಡಿ ಚೆಕ್‍ಪೆÇೀಸ್ಟ್)ಬಳಿ ದ್ವಾರವನ್ನು ಪಂಚಾಯಿತಿ ಸದಸ್ಯರಾದ ಎ.ಎಂ. ಬೋಪಣ್ಣ, ಪಿ.ಕೆ. ಗೀತಾ ಉದ್ಗಾಟಿಸಲಿದ್ದಾರೆ.
ಕೊಡಗಿನ ಗೌರಮ್ಮ ದ್ವಾರ, ಕೊಡಗಿನ ಪ್ರಥಮ ಮಹಿಳಾ ಸಾಹಿತಿ (ಕಂಡಿಮಕ್ಕಿ ದೇವಸ್ಥಾನಕ್ಕೆ ಹೋಗುವ ದಾರಿ) ದ್ವಾರವನ್ನು ಪಿ.ಬಿ. ಚಂಗಪ್ಪ, ಆಲೀಮಾ ಅವರು ಉದ್ಘಾಟಿಸಲಿದ್ದಾರೆ.
ಹರದಾಸ ಅಪ್ಪಚ್ಚ ಕವಿ ದ್ವಾರ (ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯ ದ್ವಾರ)ವನ್ನು ಪಂಚಾಯಿತಿ ಸದಸ್ಯರಾದ ಲತಾ ಹಾಗೂ ಕವಿತಾ ಉದ್ಘಾಟಿಸಲಿದ್ದಾರೆ.
ಐ. ಮಾ. ಮುತ್ತಣ್ಣ ಸಭಾಂಗಣ ವೇದಿಕೆಯನ್ನು ಪಂಚಾಯಿತಿ ಸದಸ್ಯರಾದ ಸುನೀತಾ, ರಂಜಿತ್ ಉದ್ಘಾಟಿಸಲಿದ್ದಾರೆ.
ರಘುನಾಥ್ ನಾಯಕ್ ವೇದಿಕೆಯನ್ನು ಪಂಚಾಯಿತಿ ಸದಸ್ಯರಾದ ಸುಧೀಶ್, ಬೋಪಣ್ಣ ಉದ್ಘಾಟಿಸಲಿದ್ದಾರೆ.
ಅಂದು ಬೆಳಿಗ್ಗೆ 8 ಗಂಟೆಗೆ ಡಾ. ಎಸ್.ವಿ ನರಸಿಂಹನ್ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ್ ಗಣಪತಿ ಉದ್ಘಾಟಿಸಲಿದ್ದಾರೆ
ವಿವಿಧ ಮಂಗಳವಾದ್ಯಗಳ ಮೂಲಕ ಪ್ರಾರಂಭಗೊಳ್ಳುವ ಮೆರವಣಿಗೆ ಆರ್ಜಿ, ಬೇಟೋಳಿ ಚರ್ಚ್ ಮುಂಭಾಗದಿಂದ ಹೊರಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯವರೆಗೆ ತೆರಳಲಿದೆ.
ಮೆರವಣಿಗೆಗೆ ಅತಿಥಿಗಳಾಗಿ ಪಟ್ಟಡ ಮನು ರಾಮಚಂದ್ರ, ಗುರುರಾಜ್, ವಸತಿ ಶಾಲೆಯ ಪ್ರಾಂಶುಪಾಲೆ ಮಮತಾ ಆಗಮಿಸಲಿದ್ದಾರೆ.
ಕಲಾತಂಡಗಳ ಉದ್ಘಾಟನೆ ಆರ್ಜಿ ಪಂಚಾಯಿತಿ ಉಪಾಧ್ಯಕ್ಷ ಉಪೇಂದ್ರ ನೆರವೇರಿಸಲಿದ್ದಾರೆ.
ಪುಸ್ತಕ ಮಳಿಗೆಯನ್ನು ಬೇಟೋಳಿ ಪಂಚಾಯಿತಿ ಉಪಾಧ್ಯಕ್ಷೆ ಶಾಂತಿ ಹಾಗೂ ಪಟ್ರಪಂಡ ಸುಬ್ರಮಣಿ, ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನ ಮಳಿಗೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಎಂ.ಎಸ್. ಪೂವಯ್ಯ, ಬೃಹತ್ ನಾಣ್ಯ ಮತ್ತು ನೋಟುಗಳ ಪ್ರದರ್ಶನ ಮಳಿಗೆಯನ್ನು ಗ್ರಾಮ ಪಂಚಾಯತ್ ಸದಸ್ಯ ವಸಂತ್ ಕಟ್ಟಿ ಉದ್ಘಾಟಿಸಲಿದ್ದಾರೆ
ವೇದಿಕೆ ಕಾರ್ಯಕ್ರಮವನ್ನು ಸ್ವಾಗತ ಸಮಿತಿ ಅಧ್ಯಕ್ಷರಾದ ವಿಧಾನ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ನಾಯಕಂಡ ಬೇಬಿ ಚಿಣ್ಣಪ್ಪ ಆಶಯ ನುಡಿಗಳನ್ನಾಡಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಮಂಡೆಕೊಂಡ ಸುಜಾ ಕುಶಾಲಪ್ಪ ,ವತ್ಸಲ ಶ್ರೀಶಾ ಅವರ ತಪಸ್ಯಾ ಗಜಲ್‍ಗಳು ಕೃತಿ ಬಿಡುಗಡೆಗೊಳಿಸಲಿದ್ದಾರೆ.
ಶಾಸಕ ಬೋಪಯ್ಯ ಸ್ಮರಣ ಸಂಚಿಕೆ ಮುಖಪುಟ ಬಿಡುಗಡೆಗೊಳಿಸಲಿದ್ದಾರೆ.
ಮೈಸೂರಿನ ಯುವರಾಜ ಕಾಲೇಜಿನ ಡಾ.ಎಂಪಿ ರೇಖಾ ವಸಂತ್ ಮುಖ್ಯ ಭಾಷಣಕಾರರಾಗಿದ್ದಾರೆ. ಡಾ.ಎಸ್ ವಿ ನರಸಿಂಹನ್ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಗೌರವ ಕಾರ್ಯದರ್ಶಿ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಲಿದ್ದಾರೆ.
ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಆರ್ಜಿ ಗ್ರಾಮದ ಸಂತ ಅಂತೋಣಿ ದೇವಾಲಯದ ರೋನಿ ರವಿಕುಮಾರ್, ಗುಂಡಿಗೆರೆಯ ಮೌಲಾನ ಸಿ.ಪಿ. ಅಹಮದ್ ಮದನಿ, ಕಸಾಪ ಅಧ್ಯಕ್ಷ ಕೇಶವ ಕಾಮತ್, ಕಸಾಪ ಪೂರ್ವಾಧ್ಯಕ್ಷ ಟಿ.ಪಿ. ರಮೇಶ್, ಎಂ.ಎಸ್ ಪೂವಯ್ಯ,ಮಧೋಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಜಿ.ಪಂ.ಮಾಜಿ ಸದಸ್ಯ ಶಶಿ ಸುಬ್ರಮಣಿ, ಮಡಿಕೇರಿ ಕಸಾಪ ಅಧ್ಯಕ್ಷ ಅಂಬೆಕಲ್ ನವೀನ್, ಸೋಮವಾರಪೇಟೆ ಕಸಾಪ ಅಧ್ಯಕ್ಷ ಎಸ್ ಡಿ ವಿಜೇತ್, ಕುಶಾಲನಗರ ಕಸಾಪ ಅಧ್ಯಕ್ಷ ಕೆ.ಎಸ್ ಮೂರ್ತಿ, ಪೊನ್ನಂಪೇಟೆ ಕಸಾಪ ಅಧ್ಯಕ್ಷ ದಯಾ ಚಂಗಪ್ಪ ಉಪಸ್ಥಿತರಿರುತ್ತಾರೆ.
ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಮಡಿಕೇರಿಯ ಸರಸ್ವತಿ ಡಿಇಡಿ ಕಾಲೇಜಿನ ಪ್ರಾಂಶುಪಾಲರಾದ ಕುಮಾರ್ ವಹಿಸಲಿದ್ದಾರೆ. ವಿರಾಜಪೇಟೆ ತಾಲೂಕು ದರ್ಶನ ವಿಚಾರಗೋಷ್ಟಿಯಲ್ಲಿ, ಸೋಮೆಯಂಡ ಕೌಶಲ್ಯ ಸತೀಶ್ ವಿರಾಜಪೇಟೆ ತಾಲೂಕಿನ ಗಡಿಭಾಗದ ಜನರ ಬದುಕು ಮತ್ತು ಭವಣೆ, ಗಡಿ ಭಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಗತ್ಯತೆ ಕುರಿತು ಸ.ಪ.ಪೂ. ಕಾಲೇಜಿನ ಉಪನ್ಯಾಸಕಿ ಡಾ.ಡಿ.ಕೆ. ಉಷಾ ಮಾತನಾಡಲಿದ್ದಾರೆ. ವಿರಾಜಪೇಟೆ ತಾಲೂಕಿನಲ್ಲಿ ಕನ್ನಡ ಭಾಷಾ ಶಿಕ್ಷಣ ಮತ್ತು ಸ್ಥಿತಿಗತಿ ಬಗ್ಗೆ ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕ ಅರ್ಜುನ್ ಮಾತನಾಡಲಿದ್ದಾರೆ.
1.30ಕ್ಕೆ ಟಿ.ಡಿ. ಮೋಹನ್ ಮತ್ತು ತಂಡದವರಿಂದ ಗಾಯನ ಕಾರ್ಯಕ್ರಮ, 2 ಗಂಟೆಗೆ ಕೊಡಗಿನ ಪಕ್ಷಿ ಲೋಕದ ಹಿನ್ನೋಟ ಕಾರ್ಯಕ್ರಮವನ್ನು ಶ್ರೀಕಾಂತ್ ರಾವ್ ನಡೆಸಿಕೊಡಲಿದ್ದಾರೆ.
ಮಧ್ಯಾಹ್ನ 2.30 ಗಂಟೆಗೆ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕುಶಾಲನಗರದ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ವಹಿಸಲಿದ್ದಾರೆ.
3.30 ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದ್ದು ಕಸಾಪ ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ ಅಧ್ಯಕ್ಷತೆ ವಹಿಸಲಿದ್ದಾರೆ. ಕೋಶಾಧಿಕಾರಿ ಶಬರೀಶ್ ಶೆಟ್ಟಿ ನಿರ್ಣಯ ಮಂಡನೆ ಮಾಡಲಿದ್ದಾರೆ.
ಸಂಜೆ 4.30 ಗಂಟೆಗೆ ಸನ್ಮಾನ ಸಮಾರಂಭ ನಡೆಯಲಿದೆ.
ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ತಹಸೀಲ್ದಾರ್ ಅರ್ಚನಾ ಭಟ್ ವಹಿಸಲಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಪುಷ್ಪಲತಾ ಶಿವಪ್ಪ,ಶಿಕ್ಷಣ ಕ್ಷೇತ್ರದಲ್ಲಿ ಪೆರಿಗ್ರೀನ್ ಮಚ್ಚಾಡೋ, ಸೈನಿಕರ ಕ್ಷೇತ್ರದಲ್ಲಿ ಭವಾನಿ ಶಂಕರ್, ವಿಶಿಷ್ಟ ಸೇವಾ ಪದಕ ಬ್ರಿಗೇಡಿಯರ್ ಪಿ.ಟಿ ಮೊಣ್ಣಪ್ಪ, ಸಹಕಾರ ಕ್ಷೇತ್ರ ಚಂದಪ್ಪಂಡ ಬಿ, ನಂಜಪ್ಪ ಜಾನಪದ ಕ್ಷೇತ್ರ ಕುಡಿಯರ ಗೋಪಮ್ಮ, ರಂಗಭೂಮಿ ತಾತಂಡ ಪ್ರತಾಪ್, ಕಬಡ್ಡಿ ಭರತ್ ಎಂ. ಆರ್, ದೇಶ ಸೇವೆಗೆ ಪಟ್ರಪಂಡ ಮೊಣ್ಣಪ್ಪ, ಸಮಾಜ ಸೇವೆ ಸಫೀರ್ ಎ.ಎ. ನಾಟಿ ವೈದ್ಯರು ನಟರಾಜ್, ಸಮಾಜ ಸೇವೆಗೆ ರತಿ, ಭರತನಾಟ್ಯದಲ್ಲಿ ಕುಮಾರಿ ಸಾನಿಧ್ಯ, ಹಾಕಿಯಲ್ಲಿ ದೇಶ್ ಪೂವಯ್ಯ ಅವರನ್ನು ಸನ್ಮಾನಿಸಲಾಗುವುದು.
ಇದೇ ಸಂದರ್ಭ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಸ್‍ಎಸ್‍ಎಲ್‍ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ
ಸಂಜೆ 4:30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಆಶಯ ನುಡಿಯನ್ನು ಸಮ್ಮೇಳನಾಧ್ಯಕ್ಷ ಡಾಕ್ಟರ್ ಎಸ್.ವಿ ನರಸಿಂಹನ್ ಮಾಡಲಿದ್ದಾರೆ.
ಕಸಾಪ ಕೊಡಗು ಜಿಲ್ಲೆ ಗೌರವ ಕಾರ್ಯದರ್ಶಿ ಮುನೀರ್ ಅಹಮದ್ ಸಮಾರೋಪ ಭಾಷಣ ಮಾಡಲಿದ್ದಾರೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬೋಜೆಗೌಡ, ಕೆಪಿಸಿಸಿ ಕಾನೂನು ಘಟಕದ ರಾಜ್ಯ ಅಧ್ಯಕ್ಷ ಎ.ಎಸ್ ಪೊನ್ನಣ್ಣ, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಕೆ. ಅಪ್ಪಣ್ಣ, ತಾ.ಪಂ. ಮಾಜಿ ಉಪಾಧ್ಯಕ್ಷ ಧರಣಿಕಟ್ಟಿ, ತಾ.ಪಂ. ಮಾಜಿ ಸದಸ್ಯ ಬಿ.ಎಂ. ಗಣೇಶ್, ಕೆಪಿಸಿಸಿ ವಕ್ತಾರ ಆರ್. ಕೆ ಅಬ್ದುಲ್ ಸಲಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ವಿ.ಎಸ್‍ಎಸ್‍ಎನಎಲ್ ಅಧ್ಯಕ್ಷ ಪಟ್ಟಡ ಮನು ರಾಮಚಂದ್ರ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಣಿ ಉಪಸ್ಥಿತರಿರುತ್ತಾರೆ.
ಸಂಜೆ 5 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಿರಿಯ ವಕೀಲ ಪುಷ್ಪರಾಜ್ ಉದ್ಘಾಟನೆ, ಅಧ್ಯಕ್ಷತೆ ಬೇಟೋಳಿ ಮಹಿಳಾ ಸಮಾಜದ ಅಧ್ಯಕ್ಷೆ ಬಿ.ಜಿ ಅನಿತಾ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ಸಿಆರ್‍ಪಿ ವಿ.ಟಿ ವೆಂಕಟೇಶ್, ಮುಖ್ಯ ಶಿಕ್ಷಕಿ ಬಿ. ಎಂ ಸುನೀತಾ, ಬೇಟೋಳಿ ಶಾಲೆಯ ಮುಖ್ಯ ಶಿಕ್ಷಕಿ ಸೀತಾ, ಆರ್ಜಿ ಶಾಲೆಯ ಮುಖ್ಯ ಶಿಕ್ಷಕಿ ಪಿ.ಬಿ. ವಸಂತಿ, ಚಿಟ್ಟಡೆ ಶಾಲೆಯ ಮು.ಶಿ. ಸುಧಾ, ಅನ್ವಾರುಲ್ ಹುದಾ ವಿದ್ಯಾ ಸಂಸ್ಥೆಯ ಮು.ಶಿ. ಚಂದ್ರಕುಮಾರ್, ಸಂಶುಲ್ ಉಲಮಾ ಶಾಲೆಯ ಸುಮಯ್ಯ, ಹೆಗ್ಗಳ ಶಾಲೆಯ ಆಶಿಯ ಹಾಗೂ ಶೋಭಾವತಿ, ಉಪಸ್ಥಿತರಿರುತ್ತಾರೆ.