ಮಡಿಕೇರಿ ಜ.22 : ವಿರಾಜಪೇಟೆ ತಾಲ್ಲೂಕಿನ ಪೆರುಂಬಾಡಿಯ ಶಂಸುಲ್ ಉಲಮ ಕಾಲೇಜು ವಿದ್ಯಾರ್ಥಿಗಳು ನಿರುಪಯುಕ್ತ ವಸ್ತುಗಳಿಂದ ಹಲವು ಕಲಾಕೃತಿಗಳನ್ನು ರಚಿಸುವ ಮೂಲಕ ಗಮನ ಸೆಳೆದಿದ್ದಾರೆ.
ಶಂಸುಲ್ ಉಲಾಮ ಅಕಾಡಮಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಮಾದರಿ ವಸ್ತು ಪ್ರದರ್ಶನದಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳು ರಚಿಸಿದ ಆರೋಗ್ಯ, ಶಿಕ್ಷಣ, ಕೈಗಾರಿಕೆ, ಕೃಷಿ ಮಾಹಿತಿ ತಂತ್ರಜ್ಞಾನ, ಉಪಗ್ರಹ ಕುರಿತ ನಿರಪಯುಕ್ತ ವಸ್ತುಗಳ ಮರುಬಳಕೆ ಪ್ರಯೋಗ ಯಶಸ್ವಿಯಾಯಿತು.
ಆಯುರ್ವೇದ, ಗಿಡಮೂಲಿಕೆಗಳು, ಮಾನವ ನಿರ್ಮಿತ ಉಪಕರಣಗಳು, ಸೌರವ್ಯೂಹ, ಮಳೆ ನೀರು ಕೊಯ್ಲು, ಜಲವಿದ್ಯುತ್, ರಾಕೆಟ್, ಕೃಷಿ, ಜೀರ್ಣಾಂಗ ವ್ಯವಸ್ಥೆ, ಉಸಿರಾಟದ ವ್ಯವಸ್ಥೆ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದಲ್ಲದೆ ಕಲಾ ಸ್ಮಾರಕಗಳಾದ ಕುತುಬ್ ಮಿನಾರ್, ಸಂಸತ್ತು, ವಿಧಾನ ಸೌಧ, ತಾಜ್ ಮಹಲ್, ಕೆಂಪು ಕೋಟೆ, ವಾಣಿಜ್ಯ ವ್ಯವಹಾರಗಳಾದ ವ್ಯಾಪಾರ ಪ್ರಕ್ರಿಯೆ, ಒಂದು ರಾಷ್ಟ್ರ ಒಂದು ತೆರಿಗೆ, ಕೂರ್ಗ್ ಇನ್ಫೋಟೆಕ್ಟ್ ಎಂಬ ಹೆಸರಿನ ಮುಂದಿನ ವ್ಯವಹಾರ ಯೋಜನೆಯನ್ನು ಅನುಷ್ಠಾನಗೊಳಿಸುವುದು, ಆರ್ಥಿಕತೆಯ ವಲಯ, ವ್ಯಾಪಾರ ಅಧ್ಯಯನಗಳು, ಜಿಎಸ್‌ಟಿ ದರಗಳು, ನಿರ್ವಹಣೆಯ ಮಟ್ಟಗಳು, ಕುಟುಂಬ ವ್ಯವಹಾರ, ಅಕೌಂಟೆನ್ಸಿ – ಲೆಕ್ಕಪತ್ರದ ಆಧಾರ ಸ್ತಂಭಗಳು, ಕಿಂಗ್ ಬುಕ್ ಆಫ್ ಅಕೌಂಟ್ಸ್, ಬ್ಯಾಲೆನ್ಸ್ ಶೀಟ್, ಪಾಲುದಾರಿಕೆ ಸಂಸ್ಥೆಗಳ ಪುನರ್ರಚನೆ, ಕಂಪ್ಯೂಟರ್ ಸೈನ್ಸ್, ಇಮೇಲ್ ವಹಿವಾಟುಗಳು, ಪ್ರೊಜೆಕ್ಟರ್, ಡಿಜಿಟಲ್ ಇಂಡಿಯಾ, ನೆಟ್‌ವರ್ಕ್ ಟೋಪೋಲಾಜಿಗಳು, ಕಂಪ್ಯೂಟರ್‌ಗಳ ಉತ್ಪಾದನೆ, ಡಿಜಿಟಲ್ ವಹಿವಾಟು, ವೈರಸ್‌ಗಳು, ಕ್ಯೂಆರ್ ಕೋಡ್ ಉತ್ಪಾದನೆ, ಕಂಪ್ಯೂಟರ್‌ನ ಘಟಕಗಳು, ಹೊಸ ಮಾಧ್ಯಮ, ಕಂಪ್ಯೂಟರ್ ಆಟಗಳು ಸೇರಿದಂತೆ ಹಲವು ಪ್ರಯೋಗಗಳನ್ನು ಮಾಡಿ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಹಂಚಿಕೊAಡರು.
ವಿರಾಜಪೇಟೆ ಸುತ್ತಮುತ್ತಲಿನ ಹಲವು ಶಾಲೆಗಳ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಪ್ರದರ್ಶನದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಸ್ತ ಕೇಂದ್ರ ಮುಸಾವರ ಸದಸ್ಯ ಎಂ.ಎA.ಅಬ್ದುಲ್ಲ ಫೈಝಿ, ಶಂಸುಲ್ ಉಲಮ ಅಕಾಡೆಮಿ ಕಾಲೇಜು ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ, ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ರಾಫಿ, ಮತ್ತೀನ್, ಡಿಎಚ್‌ಎಸ್ ಸೂಫಿ ಹಾಜಿ, ಕಾಲೇಜು ಪ್ರಾಂಶುಪಾಲೆ ಭಾನುಮತಿ, ಪ್ರಮುಖರಾದ ಉಮ್ಮರ್ ಫೈಝಿ, ಸಲೀಂ ಹಾಜಿ, ಮೊಹಮ್ಮದ್ ಅಲಿ ಹಾಜಿ, ರೌವೂಪ್ ಹಾಜಿ, ಬಶೀರ್ ಹಾಜಿ, ಲತೀಫ್, ಹಮೀದ್ ಮತ್ತಿತರರು ಉಪಸ್ಥಿತರಿದ್ದರು.
Breaking News
- *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮ : ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಿ : ಎಂ.ಪಿ.ಕೇಶವ ಕಾಮತ್*
- *ನ.26ರಂದು ಸಿಎನ್‌ಸಿಯಿಂದ ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ಶಿಶು ಸಾಹಿತ್ಯದ ಪಿತಾಮಹ ಪಂಜೆ ಮಂಗೇಶರಾಯರು*
- *ಸುಂಟಿಕೊಪ್ಪದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ*
- *ಹೆಗ್ಗಳ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*
- *ಕೂತಿನಾಡು : ದೇವಾಲಯದ ಜೀರ್ಣೋದ್ಧಾರಕ್ಕೆ ಆರೋಡ ತಾಂಬೂಲ ಪ್ರಶ್ನೆ*
- *ಮಡಿಕೇರಿ : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ*
- ಕುಶಾಲನಗರ ಕನ್ನಡ ಭಾರತಿ ಕಾಲೇಜಿನಲ್ಲಿ ಅಕ್ಷರ ಜ್ಯೋತಿ ಯಾತ್ರೆ ಕುರಿತು ಉಪನ್ಯಾಸ : ವಿದ್ಯಾರ್ಥಿಗಳಲ್ಲಿ ಉತ್ತರ ಪ್ರೇರಣೆ, ಸ್ಫೂರ್ತಿ ಬೆಳೆಸಬೇಕು : ಬಸವಕುಮಾರ್ ಪಾಟೀಲ್*
- *ಶ್ರದ್ಧಾಭಕ್ತಿಯಿಂದ ಜರುಗಿದ ಅರಪಟ್ಟು ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹಾಪೂಜೆ*
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*