ಮಡಿಕೇರಿ ಜ.23 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯ ರೋಗ ಲಕ್ಷಣ ಶಾಸ್ತ್ರ ವಿಭಾಗದ ವತಿಯಿಂದ ಗರ್ಭಚೀಲ ಮತ್ತು ಗರ್ಭಕೋಶದ ಕ್ಯಾನ್ಸರ್ ಕುರಿತು ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಮುಖ್ಯ ಆಡಳಿತಾಧಿಕಾರಿ ಸ್ವಾಮಿ ಎ.ಎಲ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲೆಯ ಹೆಸರಾಂತ ರೋಗ ಲಕ್ಷಣ ಶಾಸ್ತ್ರ ಮುಖ್ಯಸ್ಥರುಗಳಾದ ಡಾ.ಅನುರಾಧ ಸಿ.ಕೆ ರಾವ್, ಡಾ ಅನಿತಾ ಪಿ ಜವಲಗಿ, ಡಾ.ಗೀತಾ ದೊಪ್ಪ, ಡಾ ಶೀಲಾದೇವಿ ಡಾ ಸುಚಿತ್ರಾ ಎಸ್, ಸಂಸ್ಥೆಯ ವಿಭಾಗದ ಮುಖ್ಯಸ್ಥರುಗಳಾದ ಡಾ.ರಾಮಚಂದ್ರ ಕಾಮತ್ ಮತ್ತು ಡಾ.ಪದ್ಮಜ ಕುಲಕರ್ಣಿ ಅವರುಗಳು ಪ್ಯಾಪ್ ಸ್ಮೈರ್, ಕ್ಯಾನ್ಸರ್, ಪತ್ತೆ ಹಚ್ಚುವ ಬಗ್ಗೆ ತಡೆಗಟ್ಟುವ ಬಗ್ಗೆ ಹಾಗೂ ಇತ್ತೀಚಿನ ಅತ್ಯಾಧುನಿಕ ಚಿಕಿತ್ಸಾ ಕ್ರಮಗಳ ಬಗ್ಗೆ ವಿಮರ್ಶೆ ಹಾಗೂ ಅಧ್ಯಯನಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಕಾರ್ಯಕ್ರಮವು ಆನ್‌ಲೈನ್ ಮತ್ತು ಆಫ್‌ಲೈನ್ ಮುಖಾಂತರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯದ ಹಲವೆಡೆಗಳಿಂದ 200 ಕ್ಕೂ ಹೆಚ್ಚು ವೈದ್ಯರುಗಳು ನೋಂದಣಿ ಮಾಡಿದ್ದರು. ನೋಂದಾಯಿತ ವೈದ್ಯರುಗಳು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕರುಗಳು ಹಾಗೂ ಇತರೆ ವೈದ್ಯಕೀಯ ಕಾಲೇಜಿನ ವೈದ್ಯರುಗಳು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಜರಿದ್ದರು.









