ಮಡಿಕೇರಿ ಜ.24 : ಮಣ್ಣು ಮತ್ತು ನೀರಿನ ಸಂರಕ್ಷಣೆಯ ಸಂದೇಶ ಸಾರುವ ರೋಟರಿ ಜಿಲ್ಲೆ 3181 ನ ಮಹತ್ವದ ಬೈಕ್ ಜಾಥಾ, ರೈಡ್ ಫಾರ್ ರೋಟರಿಗೆ ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಸಂಭ್ರಮದ ಸ್ವಾಗತ ಕೋರಲಾಯಿತು.
ಏಳನೇ ಆವೖತ್ತಿಯ ರೈಡ್ ಫಾರ್ ರೋಟರಿಯಲ್ಲಿ ಈ ವಷ೯ 16 ದೇಶಗಳ 41 ಬೈಕ್ ಸವಾರರು ಪಾಲ್ಗೊಂಡಿದ್ದಾರೆ. ಮಡಿಕೇರಿ ರೋಟರಿ ಸಭಾಂಗಣದಲ್ಲಿ ರೋಟರಿ ಮಾಜಿ ಗವನ೯ರ್ ಡಾ.ರವಿ ಅಪ್ಪಾಜಿ, ರೋಟರಿ ವಲಯ 6 ರ ಸಹಾಯಕ ಗವನ೯ರ್ ರತನ್ ತಮ್ಮಯ್ಯ, ರೋಟರಿ ಅಧ್ಯಕ್ಷ ಕಾಂಡಂಡ ಕಾಯ೯ಪ್ಪ, ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಅಂತರರಾಷ್ಟ್ರೀಯ ಸೇನಾ ಸಮಿತಿ ಅಧ್ಯಕ್ಷ ದೇವಣೀರ ಕಿರಣ್, ಗೀತಾ ಗಿರೀಶ್, ಶರತ್, ಅಮರ್, ಇನ್ನರ್ ವೀಲ್ ಸಂಸ್ಥೆಯ ಮುಂದಿನ ವಷ೯ದ ಜಿಲ್ಲಾಧ್ಯಕ್ಷೆ ಪೂಣಿ೯ಮಾ ರವಿ ಸೇರಿದಂತೆ ರೋಟರಿ ಪ್ರಮುಖರು ರೈಡ್ ಫಾರ್ ರೋಟರಿ ತಂಡವನ್ನು ಸ್ವಾಗತಿಸಿದರು.
ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಲ ಹೊತ್ತು ಮಣ್ಣು ಮತ್ತು ನೀರಿನ ಸಂರಕ್ಷಣೆಯ ಸಂದೇಶ ಫಲಕದೊಂದಿಗೆ ತಮ್ಮ ಜಾಥಾದ ಉದ್ದೇಶದ ಮಾಹಿತಿ ನೀಡಿದ ಸವಾರರು ತರುವಾಯ ಕಾಲೇಜು ರಸ್ತೆ, ರಾಜಾಸೀಟ್ ರಸ್ತೆಗಾಗಿ ಮೇಕೇರಿ ಗ್ರಾಮಕ್ಕೆ ತೆರಳಿದರು.
ಈ ಸಂದಭ೯ ಮಾತನಾಡಿದ ನ್ಯೂಯಾಕ್೯ನ ಜೈನ್ಸಿ ಕ್ಲೇವಡ್೯ ಭಾರತ ಅತ್ಯಂತ ಸುಂದರವಾದ ಪ್ರಾಕೖತ್ತಿಕ ಶ್ರೀಮಂತಿಕೆಯ ದೇಶವಾಗಿದೆ. ಅದರಲ್ಲಿಯೂ ದಕ್ಷಿಣ ಭಾರತದ ಹಲವು ಪ್ರದೇಶಗಳು ಅತ್ಯಂತ ರಮಣೀಯವಾಗಿದ್ದು ಮನಸ್ಸಿಗೆ ಸಂತೋಷ ತಂದಿದೆ. ಭಾರತದಲ್ಲಿ ಹಿಂದೆಂದಿಗಿಂತಲೂ ಈಗ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತಿರುವುದು ಸಮಧಾನದ ಅಂಶ. ಜಗತ್ತಿನ ಪ್ರತೀ ಜೀವಿಯೂ ನೀರು ಮತ್ತು ಮಣ್ಣಿನ ರಕ್ಷಣೆಗೆ ಪ್ರತೀಯೋವ೯ರೂ ಪಣ ತೊಡಬೇಕಾಗಿರುವುದು ಕತ೯ವ್ಯವಾಗಿದೆ ಎಂದು ಹೇಳಿದರು.
ಕಳೆದ 7 ಆವೖತ್ತಿಗಳಿಂದಲೂ ರೈಡ್ ಫಾರ್ ರೋಟರಿಗೆ ಮಾಗ೯ದಶ೯ಕರಾಗಿರುವ ರಾಘವೇಂದ್ರ ಯಾರಂಗಲ್ ಮಾತನಾಡಿ, ಇದೇ 15 ರಂದು ತಮಿಳುನಾಡಿನ ಮಹಾಬಲೀಪುರಂನಲ್ಲಿ ರೈಡ್ ಫಾರ್ ರೋಟರಿಯ ಜಾಥಾ ಆರಂಭವಾಗಿ ತಮಿಳುನಾಡು, ಆಂಧ್ರ ಮೂಲಕ ಕನಾ೯ಟಕ ಪ್ರವೇಶಿಸಿದ್ದು ಇದೇ 27 ರಂದು ಮಂಗಳೂರಿನಲ್ಲಿ ಆಯೋಜಿತ ರೋಟರಿ ಜಿಲ್ಲಾ ಸಮಾವೇಶದಲ್ಲಿ ಸಮಾಪನಗೊಳ್ಳಲಿದೆ. ಈ ವಷ೯ವೂ ರೋಟರಿಯ ಮಹತ್ವದ ಯೋಜನೆ ರೈಡ್ ಫಾರ್ ರೋಟರಿಗೆ ಅತ್ಯುತ್ತಮ ಸ್ಪಂದನೆ ದೊರಕಿದೆ ಎದರು.
ರೋಟರಿ ರೈಡ್ ಫಾರ್ ರೋಟರಿಯ ಜಿಲ್ಲಾ ಸಮಿತಿ ಅಧ್ಯಕ್ಷ ಕೖಷ್ಣ ನಾರಾಯಣ ಮುಳಿಯ ಪ್ರತಿಕ್ರಿಯಿಸಿ, ರೋಟರಿ ಜಿಲ್ಲಾ ಗವನ೯ರ್ ಪ್ರಕಾಶ್ ಕಾರಂತ್ ಆಶಯದಂತೆ ವಿದೇಶಿ ಸವಾರರನ್ನೊಳಗೊಂಡ 7 ನೇ ಆವೖತ್ತಿಯ ರೈಡ್ ಫಾರ್ ರೋಟರಿಯು ಅತ್ಯಂತ ಸಫಲವಾಗಿದೆ. ಕೊಡಗಿಗೆ ಬಂದಾಗ ಮಡಿಕೇರಿ ರೋಟರಿ ಸಂಸ್ಥೆಯವರು ಕೊಡಗಿನ ಆಚಾರ ವಿಚಾರ, ಸ್ಥಳೀಯ ಸಂಸ್ಕೖತಿ ಪರಿಚಯ ಮಾಡುವ ಕಾಯ೯ಕ್ರಮ ಆಯೋಜಿಸುವ ಮೂಲ ಕ 16 ದೇಶಗಳ ಪ್ರತಿನಿಧಿಗಳಿಗೂ ಕೊಡಗಿನ ಸಾಂಸ್ಕೖತಿಕ ಕಂಪನ್ನು ಬೀರಿದ್ದಾರೆ ಎಂದರು.
ರೋಟರಿ ಸಹಾಯಕ ಗವನ೯ರ್ ಕೆ.ಎಸ್.ರತನ್ ತಮ್ಮಯ್ಯ ಮಾತನಾಡಿ, ಕಾಫಿ ಕರಿಮೆಣಸು ಬೆಳೆಗಳ ಕೊಡಗನ್ನು ವಿದೇಶಿ ಪ್ರತಿನಿಧಿಗಳು ಅಪಾರವಾಗಿ ಮೆಚ್ಚಿದ್ದು ರೋಟರಿ ಮೂಲಕ ಕೊಡಗಿನ ಆತಿಥ್ಯವನ್ನು ಮತ್ತೊಮ್ಮೆ ರೋಟರಿ ಮೂಲಕ ಪರಿಚಯಿಸಿದ್ದೇವೆ. ಕೊಡಗಿನ ಹಲವು ರೋಟರಿ ಸದಸ್ಯರು ತಮ್ಮ ಸಂಸ್ಥೆಗಳ ಧ್ವಜಗಳನ್ನು ವಿದೇಶಿ ಪ್ರತಿನಿಧಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ವಿದೇಶದ ರೋಟರಿ ಸಂಸ್ಥೆಗಳ ಅನೇಕ ಯೋಜನೆಗಳಿಗೆ ರೈಡ್ ಫಾರ್ ರೋಟರಿ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದಭ೯ ಮಡಿಕೇರಿ ನಗರ ಸಂಚಾರಿ ಪೊಲೀಸರು ರೈಡ್ ಫಾರ್ ರೋಟರಿ ಜಾಥಾದಲ್ಲಿ ಸಂಚಾರ ಜಾಗ್ರತಿಯ ಮಾಹಿತಿ ನೀಡಿ ಗಮನ ಸೆಳೆದರು. 12 ಮಹಿಳಾ ಬೈಕ್ ಸವಾರರೂ ರೈಡ್ ಫಾರ್ ರೋಟರಿಯಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಮುಖ್ಯರಸ್ತೆಯಲ್ಲಿ ಸಾಗಿದ ರೈಡ್ ಫಾರ್ ರೋಟರಿ ನೂರಾರು ಸಾವ೯ಜನಿಕರ ಗಮನ ಸೆಳೆಯಿತು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*