ಸೋಮವಾರಪೇಟೆ ಜ.24 : ಸಮೀಪದ ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಎಸ್. ಮಹೇಶ್ ಅವರು ಅವರೋಧವಾಗಿ ಆಯ್ಕೆಯಾಗಿದ್ದಾರೆ. ಕಾಲೇಜಿನ ಸಭಾಂಗಣದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಪ್ರಾಂಶುಪಾಲರಾದ ಹೆಚ್.ಎನ್.ರಾಜು ಅವರನ್ನು ನೇಮಕ ಮಾಡಲಾಯಿತು. ಸದಸ್ಯರುಗಳಾಗಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಎಂ.ಪಿ.ಗೋಪಾಲ್ ತಾಕೇರಿ, ಜೆ.ಸಿ.ಶೇಖರ್ ಸೋಮವಾರಪೇಟೆ, ತಂಗಮ್ಮ ಹಾನಗಲ್, ಧರ್ಮಪ್ಪ ಹರಗ, ಮನುಕುಮಾರ್ ಚೌಡ್ಲು, ಭಾನುಪ್ರಕಾಶ್, ಯಡೂರು ಪ್ರಸನ್ನ ನಾಯರ್ ಸೋಮವಾರಪೇಟೆ, ಜೀವನ್ ನೇಗಳ್ಳಿ ಸೋಮವಾರಪೇಟೆ, ಶರತ್ ಸೋಮವಾರಪೇಟೆ, ಲಕ್ಷ್ಮಿ ಗ್ರಾ.ಪಂ ಅಧ್ಯಕ್ಷರು, ಪ್ರವೀಣ್ ಸದಸ್ಯರು, ಪ್ರಶಾಂತ್, ದಿವ್ಯಮೋಹನ್, ಪಿ.ಡಿ.ಪ್ರಕಾಶ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಆಯ್ಕೆಯಾದರು.
ಕಾಲೇಜಿನ ಸರ್ವತೋಮುಖ ಅಬಿವೃದ್ಧಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಚರ್ಚಿಸಲಾಯಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹೊಸದಾಗಿ ಬಿ.ಸಿ.ಎ., ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಟೂರಿಸಂ ವಿಷಯಗಳಿಗೆ ಸಂಬಂಧಿಸಿದಂತೆ ಹೊಸ ಕೋರ್ಸ್ ಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು ಪೋಷಕರು, ಸಾರ್ವಜನಿಕರು ಹಾಗೂ ಕಾಲೇಜಿನ ಉಪನ್ಯಾಸಕರು ಕೈ ಜೋಡಿಸುವಂತೆ ಶಾಸಕರು ಮನವಿ ಮಾಡಿದರು. ಅಲ್ಲದೇ ನ್ಯಾಕ್‌ಗೆ ಸಂಬಂಧಿಸಿದಂತೆ ಎಲ್ಲ ತಯಾರಿಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಕಾಲೇಜಿನ ಬಗ್ಗೆ ಅಪಪ್ರಚಾರವಾಗುತ್ತಿದ್ದು ಈ ಬಗ್ಗೆ ಯಾರೂ ಸಹ ಕಿವಿಗೊಡದೇ ಕಾಲೇಜಿನ ಅಭಿವೃದ್ಧಿಗೆ ಎಲ್ಲ ಗ್ರಾಮಸ್ಥರು ಸಹಕರಿಸಬೇಕು ಎಂದು ಈ ಸಂದರ್ಭ ಒಮ್ಮತದಿಂದ ತೀರ್ಮಾನಿಸಲಾಯಿತು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕಾಲೇಜು ಅಭಿವೃಧ್ಧಿ ಸಮಿತಿ ಕಾಲೇಜಿನಲ್ಲಿ ಎಲ್ಲ ಮೂಲಭೂತ ಸೌಕರ್ಯಗಳು, ನುರಿತ ಉಪನ್ಯಾಸಕರು ಮತ್ತು ಎಲ್ಲ ರೀತಿಯ ಸೌಲಭ್ಯಗಳಿದ್ದು ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಪೋಷಕರು ಗಮನಹರಿಸಬೇಕು ಎಂದು ಸೂಚಿಸಿದರು.
:: ಪೋಷಕರ ಮತ್ತು ಹಳೆಯ ವಿದ್ಯಾರ್ಥಿಗಳ ಸಭೆ ಜನವರಿ 30 ಕ್ಕೆ ::
ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಭೆಯನ್ನು ಜನವರಿ 30 ಸೋಮವಾರ ಬೆಳಗ್ಗೆ 10 ಗಂಟೆಯಿಂದ ಕಾಲೇಜಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಎಂಪಿಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿದೆ. ಹಾಗೆಯೇ ಅಂದು 11 ಗಂಟೆಗೆ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಸಹ ಹಮ್ಮಿಕೊಳ್ಳಲಾಗಿದೆಯೆಂದು ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಎನ್.ರಾಜುರವರು ತಿಳಿಸಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸಂಘದ ಮಾಹಿತಿಗಾಗಿ ಎಸ್.ಮಹೇಶ್ (ಕಾಲೇಜಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು) 9481059223, ಹಳೆಯ ವಿದ್ರ‍್ಥಿಗಳ ಸಭೆಯ ಉಸ್ತುವಾರಿ ಭಾನುಪ್ರಕಾಶ್ – 9449226443 ಸುನಿಲ್ ಎಂ.ಎಸ್. ಇತಿಹಾಸ ಉಪನ್ಯಾಸಕರು – 8904040640 ಅವರನ್ನು ಸಂಪರ್ಕಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.