ಮಡಿಕೇರಿ ಜ.24 : ಪಕ್ಷದ ಮುಖಂಡರಾದ ನಾಪಂಡ ಮುತ್ತಪ್ಪ ಅವರ ವಿರುದ್ಧ ಕ್ರಮಕೈಗೊಳ್ಳುವುದು ರಾಜಾಧ್ಯಕ್ಷರಿಗೆ ಸಂಬಂಧಪಟ್ಟ ವಿಷಯ. ಪಕ್ಷದ ಅಂತರಿಕ ವಿಷಯವನ್ನು ಪಕ್ಷದ ಮುಖಂಡರ ಸಮ್ಮುಖದಲ್ಲಿ ಚರ್ಚೆಯಾಗಬೇಕು. ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ವಿಷಯವನ್ನು ಮಾಧ್ಯಮದವರ ಮುಂದೆ ತರುವುದು ಸರಿಯಾದ ಕ್ರಮವಲ್ಲ, ಈ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದ್ದಾರೆ.
ಸೋಮವಾರಪೇಟೆಯಲ್ಲಿ ಮಾತನಾಡಿದ ಅವರು ಮಾಜಿ ಸಚಿವ ಬಿ.ಎ.ಜೀವಿಜಯ ಅವರು, ಜೆಡಿಎಸ್ ಬಿಟ್ಟಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಬಸ್‌ನಿಂದ ಡ್ರೈವರ್ ಇಳಿದಿದ್ದಾರೆ. ಪ್ರಯಾಣಿಕರು ಬಸ್‌ನಲ್ಲೇ ಇದ್ದಾರೆ. ದೇವೆಗೌಡರು ಜೀವಿಜಯ ಅವರ ಮನೆಗೆ ಹೋಗಿ ಬಿ ಫಾರಂ ಕೊಡುತ್ತಿದ್ದರು. ಈಗ ಜೀವಿಜಯ ಟಿಕೇಟ್‌ಗಾಗಿ ಮನೆ ಮನೆ ಬಾಗಿಲು ಬಡಿಯುವಂತಾಗಿದೆ ಎಂದು ಹೇಳಿದರು.








