ಮಡಿಕೇರಿ ಜ.25 : ಮಡಿಕೇರಿ ಆಕಾಶವಾಣಿಯಿಂದ ಫೆಬ್ರವರಿ ತಿಂಗಳಿನಿಂದ ಪ್ರತಿ ಭಾನುವಾರ ಹಗಲು 4 ರಿಂದ 4.30 ರವರೆಗೆ “ಜನಪದ ಸಿರಿ” ಕಾರ್ಯಕ್ರಮ ಪ್ರಸಾರವಾಗಲಿದೆ.
ಕೊಡಗಿನ ಜನಪದ ಕಲಾವಿದರ ಕುರಿತ ಕಾರ್ಯಕ್ರಮ ಇದು. ಈ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಾಗೂ ಕಲಾ ಪ್ರಕಾರಗಳನ್ನು ಹಂಚಿಕೊಳ್ಳಲು ವಿನಂತಿಸಲಾಗಿದೆ. 9902358367 ಈ ಸಂಖ್ಯೆಗೆ ಸಂಪರ್ಕಿಸಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ. ಹಾಗೆಯೇ ಸೇನೆಯಲ್ಲಿ ಸೇವೆ ಸಲ್ಲಿಸಿದವರ ಅನುಭವಗಳ ಕಥನ ಸೇನಾ ಸ್ಮರಣೆಯೂ ಪ್ರತಿ ಬುಧವಾರ ಸಂಜೆ 5 ಕ್ಕೆ ಬಿತ್ತರವಾಗುತ್ತಿದ್ದು, ಸೇನೆಯಲ್ಲಿದ್ದು ಬಂದ ಕೊಡಗಿನ ಜನತೆ 9449167463 ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ವಿಜಯ್ ಅಂಗಡಿ ಅವರು ತಿಳಿಸಿದ್ದಾರೆ.














