ಮಡಿಕೇರಿ ಜ.27 : ಹುಣಸೂರು ಭಾಗಮಂಡಲ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಹಳೇತಾಲೂಕು ಮಾರ್ಗವಾಗಿ ಭಾಗಮಂಡಲಕ್ಕೆ ತೆರಳುವ ರಸ್ತೆ ಮರುಡಾಂಬರೀಕರಣಕ್ಕೆ ಕೆಡಿಪಿ ಸದಸ್ಯ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಹಳೇತಾಲ್ಲೂಕುನಿಂದ ಚೋನಾಕೆರೆ ಶಾಲಿಮಾರ್ ಮಿಲ್ ವರೆಗೆ ರಸ್ತೆ ಹದಗೆಟ್ಟು ಸಾರ್ವಜನಿಕರಿಗೆ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ಶಾಸಕ ಕೆ.ಜಿ ಬೋಪಯ್ಯ ಅವರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸ್ಪಂದಿಸಿದ ಶಾಸಕರು ಸುಮಾರು 86 ಲಕ್ಷ ರೂ ವೆಚ್ಚದಲ್ಲಿ 1.6 ಕಿ.ಮೀ.ರಸ್ತೆಯನ್ನು ಮರು ಡಾಂಬರೀಕರಣ ಗೊಳಿಸಲು ಚಾಲನೆ ನೀಡಲಾಗಿದೆ. ಎರಡು ದಿನದಲ್ಲಿ ಡಾಂಬರೀಕರಣ ಪೂರ್ಣಗೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಂಬಿ ಕಾರ್ಯಾಪ್ಪ ತಿಳಿಸಿದರು.
ಈ ಸಂದರ್ಭ ಬಿಜೆಪಿ ತಾಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಬಿಜೆಪಿ ಯುವಮೋರ್ಚಾದ ಶಿವಚಾಳಿಯಂಡ ಜಗದೀಶ್, ಬಿಜೆಪಿ ಮುಖಂಡರಾದ ಕುಂದ್ಯೋಳಂಡ ರಮೇಶ್ ಮುದ್ದಯ್ಯ, ಚಿಯಕ ಪೂವಂಡ ಅಪ್ಪಚ್ಚ, ಕಂಗಾಂಡ ಜಾಲಿ ಪೂವಪ್ಪ, ಚಿಯಕಪೂವಂಡ ಸುರಿ, ಕುಲ್ಲೇಟಿರ ರಾಜೇಶ್, ಚೋಕಿರ ಸಜಿತ್, ಚಿಯಕಪೂವಂಡ ಸತೀಶ್, ಶಿವಚಾಳಿಯಂಡ ಕಿಶೋರ್, ಬಾಳೆಯಡ ಶಿವು, ಪಾಡಿಯಮ್ಮಂಡ ಮುತ್ತಮ್ಮಯ್ಯ, ಕುಲ್ಲೇಟಿರ ದೇವಯ್ಯ, ಸ್ಥಳೀಯರಾದ ಮಹಮೂದ್, ಗುತ್ತಿಗೆದಾರ ಸಂಜಯ್ ಪೂಣಚ್ಚ ಮತ್ತಿತರರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು