ಕುಶಾಲನಗರ ಜ.27 : ಕುಶಾಲನಗರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 74ನೇ ಗಣರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಾಜಿ ಸೈನಿಕ ಕೆ.ಸಿ.ಸೋಮಣ್ಣ, ಕ್ರೀಡಾಪಟು ಎಸ್.ಪುನೀತ್, ಪೌರಕಾರ್ಮಿಕ ಮಹದೇವ್, ಹಿರಿಯ ಪತ್ರಕರ್ತಎಂ.ಎನ್.ಚಂದ್ರಮೋಹನ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಗ್ರಾಮ ಒನ್ ನಿರ್ವಾಹಕರಾದ ಪಿ.ಕೆ.ಧರ್ಮರಾಜ್, ಹೆಚ್.ಪಿ ಶ್ರೀಕಾಂತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.







