ವಿರಾಜಪೇಟೆ ಜ.27 : ಸಮರ್ಪಣಾ ಶ್ರೀಮತಿ ರಾಧಮ್ಮ ಸ್ಮಾರಕ ಟ್ರಸ್ಟ್ ವತಿಯಿಂದ ಮೈಸೂರಿನಲ್ಲಿ ನಡೆದ 10ನೇ ವರ್ಷದ ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ವಿರಾಜಪೇಟೆಯ ಕೆ.ಜಿ.ಅನುಷಾ ಸ್ಪರ್ಧಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ದೇವರನಾಮ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅನುಷಾ ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರು ರಾಜಲಕ್ಷ್ಮಿ ಅವರ ಪುತ್ರಿ. ವಿರಾಜಪೇಟೆಯ ಸ್ವರಾರ್ಣವ ಸಂಗೀತ ಶಾಲೆಯ ವಿದ್ಯಾರ್ಥಿಯಾಗಿದ್ದು, ವಿದ್ವಾನ್ ದಿಲಿಕುಮಾರ್ ಅವರ ಶಿಷ್ಯೆಯಾಗಿದ್ದಾರೆ.
ಇವರೊಂದಿಗೆ ಟಿ.ಎಸ್.ದೇವಿಕ ಅವರು ಭಾಗವಹಿಸಿ ಸಮಧಾನಕರ ಬಹುಮಾನ ಪಡೆದಿದ್ದಾರೆ.







