ಮಡಿಕೇರಿ ಜ.27 : ಸೋಮವಾರಪೇಟೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎನ್. ಮಹೇಂದ್ರ ಕುಮಾರ್ (56) ಇಂದು ಸಂಜೆ ಸೋಮವಾರಪೇಟೆಯ ತಮ್ಮ ವಸತಿ ಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ,ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅತ್ಯಕ್ರಿಯೆ ನಾಳೆ (ಶನಿವಾರ)ಮಧ್ಯಾಹ್ನ ದ ನಂತರ ಅವರ ಸ್ವಗ್ರಾಮ ಕುಶಾಲನಗರ ಸಮೀಪದ ಬಸವನ ಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.







