ಮಡಿಕೇರಿ ಜ.30 : ಕೊಡಗು ಪ್ರೆಸ್‍ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಫೆ.6 ರಂದು ಮಡಿಕೇರಿಯಲ್ಲಿ ‘ಪರಶುರಾಮ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ನಗರದ ಸಂತಜೋಸೆಫರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಸಂಜೆ 6.30ಕ್ಕೆ ಶುರುವಾಗುವ ನಾಟಕಕ್ಕೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಕಾರ್ಕಳದ ಯಕ್ಷರಂಗಾಯಣ ಅಭಿನಯಿಸುವ ‘ಪರಶುರಾಮ’ ಸಾತ್ವಿಕ ನಾಟಕವನ್ನು ಶಶಿರಾಜ್ ಕಾವೂರು ರಚಿಸಿದ್ದು, ಡಾ.ಜೀವನ್‍ರಾಂ ಸುಳ್ಯ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೂಡಿಬರಲಿದೆ.









