ಮಡಿಕೇರಿ ಜ.30 : ಚೆಟ್ಟಳ್ಳಿಯ ಪ್ರೌಡಶಾಲಾ ಮೈದಾನದಲ್ಲಿ ಬಟ್ಟೀರ ಕುಟುಂಬಸ್ಥರ ಸಮ್ಮುಖದಲ್ಲಿ ಈಗಲ್ ಐಸ್ ಸೂಟರ್ಸ್ ಬಟ್ಟೀರ ತೆಂಗಿನಕಾಯಿ ಗುಂಡುಹೊಡೆಯುವ ಸ್ಪರ್ಧೆ ನಡೆಯಿತು.
ಹಿರಿಯರಾದ ಬಟ್ಟೀರ ದೇವಯ್ಯ, ನಿವೃತ್ತ ಏರ್ಫೋರ್ಸ್ ಅಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ, ಬಟ್ಟಿರ ಬೋಪಯ್ಯ, ಬಟ್ಟೀರ ರಕ್ಷುಕಾಳಪ್ಪ, ಮಂಗಳೂರು ಬಜ್ಪೆಯ ಸಿಮ್ಸನ್ಸ್ ಹೌಸ್ ನ ಮಾಲೀಕ ರಾಯ್ ಪ್ರಕಾಶ್ ಸಿಮ್ಸನ್ಸ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಬಟ್ಟೀರ ರಕ್ಷು ಕಾಳಪ್ಪ, ಸಿಮ್ಸಸನ್, ಬಟ್ಟೀರ ಮುತ್ತಣ್ಣ ತೆಂಗಿನಕಾಯಿಗೆ ಗುಂಡುಹೊಡೆದು ಶೂಟಿಂಗ್ ಸ್ಪರ್ಧೆಗೆ ಚಾಲನೆ ನೀಡಿದರು. ಚೆಟ್ಟಳ್ಳಿಯ ಬಟ್ಟೀರ ಕುಟುಂಬದವರು ಕೊಡವ ಸಂಪ್ರದಾಯ ಉಡುಪಿನಲ್ಲಿ ಪಾಲ್ಗೊಂಡಿದ್ದರು.
ಸಮಾರೋಪ: ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವುಕುಮಾರ್ ನಾಣಯ್ಯ ಮಾತನಾಡಿ, ನಾಪೋಕ್ಲುವಿನಲ್ಲಿ ಒಳಾಂಗಣ ಶೂಟಿಂಗ್ ಕೇಂದ್ರ ಸ್ಥಾಪಿಸಲು ಸರಕಾರಕ್ಕೆ ಒತ್ತಾಯಿಸಿದ್ದು ಮುಂದಿನ ಚುನಾವಣೆ ಕಳೆದ ನಂತರ ಶೂಟಿಂಗ್ ಕೇಂದ್ರ ಸ್ಥಾಪನೆಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ಚೆಟ್ಟಳ್ಳಿ ಪ್ರೌಡಶಾಲಾ ಸಂಚಾಲಕ ಹಾಗೂ ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಮಾತನಾಡಿ, ಚೆಟ್ಟಳ್ಳಿ ಪುಟ್ಟ ಗ್ರಾಮವಾದರೂ ಹಿಂದಿನಿಂದಲೂ ಕ್ರೀಡೆಗೆ ಹೆಸರು ವಾಸಿಯಾಗಿದೆ. ಬಟ್ಟಿರ ಕುಟುಂಬಸ್ಥರು ಆಯೋಜಿಸಿರುವ ಶೂಟಿಂಗ್ ಸ್ಪರ್ಧೆ ಪ್ರಶಂಸಿಸಿದರು.
ಬಟ್ಟೀರ ರಕ್ಷು ಕಾಳಪ್ಪ ಮಾತನಾಡಿ, ಊರಿನವರ ದಾನಿಗಳ ಸಹಕಾರದಿಂದ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲು ಕಾರಣವಾಯಿ ತೆಂದರು.
ರಾಷ್ಟ್ರಮಟ್ಟದ ರಿನೋಂಡ್ ಶೂಟರ್ ನಲ್ಲಿ ಸಾಧನೆಗೈದ ಸ್ಯಾಮಿಯಲ್ ಸಿಮ್ಮ ಅವರನ್ನು ಬಟ್ಟೀರ ಕುಟುಂಬಸ್ಥರ ಪರಾವಾಗಿ ತೇಲಪಂಡ ಶಿವುಕುಮಾರ್ ನಾಣಯ್ಯ ಸನ್ಮಾನಿಸಿ ಗೌರವಿಸಿದರು.
ಪುತ್ತರಿರ ರೂಪಾತಿಮ್ಮಯ್ಯ ಪ್ರಾರ್ಥಿತಿಸಿದರು.
ಕಾರ್ಯಕ್ರಮದಲ್ಲಿ ಪುತ್ತರಿರ ಸುಜುಬಿದ್ದಪ್ಪ, ಪುತ್ತರಿರ ಗಣೇಶ್ ಭೀಮಯ್ಯ, ಕೇಚೆಟ್ಟೀರ ಶಿವು, ಪುತ್ತರಿರ ಪ್ರೇಮಾ ಭೀಮಯ್ಯ, ಬಟ್ಟಿರ ಅಯ್ಯಪ್ಪ, ಬಟ್ಟೀರ ದೇವಯ್ಯ ,ಬಟ್ಟೀರ ಪೂರ್ಣಚ್ಚ, ಪುತ್ತರಿರ ಶಿವುನಂಜಪ್ಪ, ಬಟ್ಟೀರ ಕಾರ್ಯಪ್ಪ, ಬಟ್ಟೀರ ಪಳಂಗಪ್ಪ, ಬಟ್ಟೀರ ಮುತ್ತಣ್ಣ, ಬಟ್ಟೀರ ಬೋಜಣ್ಣ, ಬಟ್ಟೀರ ವೇಣುಗೋಪಾಲ್ ಪುತ್ತರಿರ ರೂಪಾತಿಮ್ಮಯ್ಯ ಮಂಗಳೂರು ಬಜ್ಪೆಯ ಕೋವಿ ಮಾರಾಟಗಾರ ಸಿಮ್ಸನ್ವರಾಯ್ ಪ್ರಕಾಶ್ ವೇದಿಕೆಯಲ್ಲಿದ್ದರು.
ಬಟೀರ ಬೋಜಣ್ಣ ವಂದಿಸಿ ಬೊಪ್ಪಟ್ಟಿರ ಅಪ್ಪುಟ್ಟ ನಾಣಯ್ಯ ಪುತ್ತರಿರ ಪಪ್ಪುತಿಮ್ಮಯ್ಯ ನಿರೂಪಿಸಿದರು.
ಸ್ಪರ್ಧಾ ವಿಜೇತರು: 12 ಬೋರ್ ಶೂಟಿಂಗ್ ನಲ್ಲಿ 127ಸ್ಪರ್ಧೆಗಳು, 22 ಸ್ಪರ್ಧೆಯಲ್ಲಿ 145, ಏರ್ಗನ್ನ್ ಸ್ಪರ್ಧೆಯಲ್ಲಿ 123 ಸ್ಪರ್ಧಿಗಳು ಭಾಗವಹಿಸಿದರು.
12 ಬೋರ್ ಸ್ಪರ್ಧೆಯಲ್ಲಿ ಅಜ್ಜೇಟಿರ ಗೌತಮ್ ಪ್ರಥಮ , ಅರಂಬೂರು ರಾಹುಲ್ ದ್ವಿತೀಯ, ಕೇಚಿರ ಶಬ್ದ್ ತೃತೀಯ, ಪುತ್ತರಿರ ಕಾರ್ತಿಕ್ ಕಾರ್ಯಪ್ಪ ನಾಲ್ಕನೇ ಸ್ಥಾನ, .22 ರೈಫಲ್ ಸ್ಪರ್ಧೆಯಲ್ಲಿ ಜೋಸೇಫ್ ಸಾಜಿತ್ ಪ್ರಥಮ, ಕನ್ನಿಕಂಡ ಅಮೂಲ್ಯ ದ್ವಿತೀಯ, ಕೇಚಿರ ಶಬ್ದ್ ತೃತೀಯ, ಚೇರುವಾಳಂಡ ರಾಶಿ ಅಯ್ಯಪ್ಪ ನಾಲ್ಕನೇ ಸ್ಥಾನ,
ಏರ್‌ಗನ್ ಸ್ಪರ್ಧೆಯಲ್ಲಿ ಕೇಚಿರ ಶಬ್ದ್ ಪ್ರಥಮ, ರಮೇಶ್ ಬಾಬು ದ್ವಿತೀಯ, ಮಹೇಶ್ ತೃತೀಯ ಪಟ್ಟಡ ಬೋಪಣ್ಣ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಪ್ರಥಮ ದ್ವಿತೀಯ ಜಾಗು, ತೃತೀಯ ವಿಜೇತರಿಗೆ ಆಕರ್ಷಕ ನಗದು ಹಾಗೂ ಟ್ರೋಫಿ ನಾಲ್ಕನೆ ವಿಜೇತರಿಗೆ ಮುಳಿಯ ಜ್ಯುವೇಲರಿಯರ ಬೆಳ್ಳಿಯ ನಾಣ್ಯ ನೀಡಲಾಯಿತು.
ಪುತ್ತರಿ ರಿಶಾಂಕ್ ನಂಜಪ್ಪ, ಮಣವಟ್ಟಿರ ವಚನ್ ಕಾಳಪ್ಪ ಹಾಗೂ ಪುಟ್ಟ ಬಾಲಕಿ ಮೇರಿಗೆ ಅಪ್ ಕಮ್ಮಿಂಗ್ ಶೂಟರ್ ಬಹುಮಾನ ನೀಡಿದರು.