ಸೋಮವಾರಪೇಟೆ ಜ.30 : ಗೌಡಳ್ಳಿಯ ಅಜ್ಜಳ್ಳಿ , ಕೋಟೆಯೂರು ಗ್ರಾಮದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಯವರ ಸಾನಿದ್ಯದಲ್ಲಿ ಜೋಡಿ ಬಸವೇಶ್ವರ ನೂತನ ದೇವಾಲಯಕ್ಕೆ ಶಂಕುಸ್ಥಾಪನೆ ನೆರವೇರಿತು.
ಪೂಜಾ ಕಾರ್ಯಗಳನ್ನು ಗ್ರಾ.ಪಂ ಸದಸ್ಯ, ನವೀನ್ ಅಜ್ಜಳ್ಳಿ ನೆರವೇರಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೋಹಿತ್, ದಿಲೀಪ್, ಮಧು, ವಸಂತ , ರವಿ ಹಾಗೂ ಭರತ್ ಇದ್ದರು.








