ಮಡಿಕೇರಿ ಜ.31 : ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಟ್ಟೂರು-ಕಾನೂರು ಕುಟ್ಟ ಮುಖ್ಯ ರಸ್ತೆ ಕಾಮಗಾರಿ ರೂ.1 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದ್ದು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು,ಜಿ.ಪಂ ವ್ಯಾಪ್ತಿಯಲ್ಲಿದ್ದ ರಸ್ತೆಯನ್ನು ಇದೀಗ ಲೋಕೋಪಯೋಗಿ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಈ ಭಾಗದ ಜನತೆ ಈ ರಸ್ತೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ನಿಟ್ಟೂರು ಗ್ರಾ.ಪಂ ಆಡಳಿತ ಮಂಡಳಿ ಒಂದು ತಂಡವಾಗಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಜನಪರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನಾರ್ಹವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೊಲ್ಲಿಹಾಡಿಯ 8 ಗಿರಿಜನ ಕುಟುಂಬಕ್ಕೆ ಹಕ್ಕು ಪತ್ರ ವಿತರಣೆ ಮಾಡಿದರು.
ನಿಟ್ಟೂರು ಗ್ರಾ.ಪಂ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಸದಸ್ಯರುಗಳಾದ ಚಕ್ಕೇರ ಸೂರ್ಯ ಅಯ್ಯಪ್ಪ, ಅಮ್ಮಣಿ, ಅಕ್ರಮ ಸಕ್ರಮ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಕಾಡೇಮಾಡ ಗಿರೀಶ್ ಗಣಪತಿ, ಸದಸ್ಯರಾದ ಮಾಪಂಗಡ ಯಮುನಾ ಚಂಗಪ್ಪ, ಪಿ. ಡಿ. ಓ ಮನಮೋಹನ್ ಆರ್.ಯಂ.ಸಿ ಮಾಜಿ ಅಧ್ಯಕ್ಷ ಮಾಚಂಗಡ ಸುಜಾ ಪೂಣಚ್ಚ, ಅದೇಂಗಡ ವಿನು ಚಂಗಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷ ಮೇಚಂಡ ಸೋಮಯ್ಯ, ಪ್ರಮುಖರಾದ ಮಲ್ಲೇಂಗಡ ಶಶಿಮಣಿ, ಪಡಿಞರಂಡ ಪ್ರಭುಕುಮಾರ್. ಗುತ್ತಿಗೆದಾರುಗಳಾದ ಹರೀಶ್ ಗೌಡ, ತೋಟಫ್ಪ ನಾಯಕ, ಕಲ್ಲಳ ವನ್ಯಜೀವಿ ವಲಯಾರಣ್ಯಧಿಕಾರಿಗಳಾದ ರಾಜಶೇಖರ್ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್ ಮತ್ತು ಮುಜಾಮಿನ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.