ಮಡಿಕೇರಿ ಜ.31 : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಹಾಗೂ ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ಪುತ್ತರಿರ ಕರುಣ್ ಕಾಳಯ್ಯ ಅವರನ್ನು ಮಡಿಕೇರಿ ಕೊಡವ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಕರುಣ್ ಕಾಳಯ್ಯ ಮೈಸೂರು ಮಿತ್ರ ದಿನ ಪತ್ರಿಕೆಯಲ್ಲಿ ಬರೆದ ‘ಮಂಜಿನ ನಗರಿಯಲ್ಲಿ ವೀರ ಸೇನಾನಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆ’ ಎಂಬ ವಿಶೇಷ ವರದಿಗೆ ರಾಜ್ಯಪ್ರಶಸ್ತಿ ಬಂದಿದ್ದು, ಪ್ರಸ್ತುತ ಶಕ್ತಿ ದಿನ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.









