ಮಡಿಕೇರಿ ಫೆ.1 : ಕೊಡಗು ಸಿರಿಗನ್ನಡ ವೇದಿಕೆ ಹಾಗೂ ಜಿಲ್ಲಾ ಮತ್ತು ಮಡಿಕೇರಿ ತಾಲೂಕು ಮಹಿಳಾ ಘಟಕದ ಸಹಯೋಗದಲ್ಲಿ ಶಿವರಾತ್ರಿಯ ಪ್ರಯುಕ್ತ ಕೊಡಗಿನ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ.
ಪರ್ವತಗಳಲ್ಲಿ ಉಗ್ರ ನರ್ತನ ಮಾಡಿದ ಶಿವ, ಶಿವನು ಭಿಕ್ಷೆಗೆ ಬಂದಾ ಎಂದು ಹದವಾಗಿ ಹಾಡುತ್ತಾ, ಜೋಳಿಗೆಧಾರಿ, ಹಿಡಿ ಬೆಲ್ಲವ ಬೇಡುವ ಶಿವ, ದೂರದ ಸ್ಮಶಾನದಲ್ಲಿ ಹಸಿ ಶವದ ತಲೆ ಸೀಳಿ ಕಪಾಲಾಕೃತಿಯನ್ನು ತಯಾರಿಸುವ ಶಿವ, ಇನ್ನೆಲ್ಲೋ ಪತ್ರೆಯ (ಭಂಗಿ) ಕಸಿ ಮಾಡಿ ಭಂಗಿಗೆ ಕೆಂಡ ಕಾಯಿಸುವ ಶಿವ, ಬ್ರಹ್ಮನ ತಲೆಯೊಂದನ್ನು ಕಡಿದು ಅದರಿಂದ ಕಪಾಲ ಮಾಡಿ ಆ ಬುರುಡೆಯನ್ನೇ ಭಂಗಿಯ ಕೊಳವೆ ಮಾಡಿಕೊಂಡ ಶಿವ, ಸೋಮರಸ ಪ್ರಿಯ ಶಿವ, ರುಂಡ ಮಾಲಾಧಾರಿ ಶಿವ, ಶ್ರಮಿಕ ವರ್ಗದ ಬೆಳಕಿನ ಶಿವ, ದ್ರಾವಿಡರ ಶಿವ, ನಾಟ್ಯ ಶಿವ, ಬುಡಕಟ್ಟು ಜನಾಂಗದ ಶಿವ, ರುದ್ರಭೂಮಿಯಲ್ಲಿ ಪ್ರೇತಗಳಿಗೆ ಪಾಠ ಮಾಡುವ ಶಿವ ಈ ವಿಷಯದ ಕುರಿತ ಕವನಗಳನ್ನು ಮಾತ್ರ ಪರಿಗಣನೆಗೆ ಒಳಪಡಿಸಲಾಗುವುದು.
ಕವನವನ್ನು ಮೊಬೈಲ್‍ನಲ್ಲಿ ಅಕ್ಷರ ತಪ್ಪಿಲ್ಲದಂತೆ ಟೈಪಿಸಿ ಕಳುಹಿಸಬೇಕು. ಕವನದ ಕೊನೆಯಲ್ಲಿ ನಿಮ್ಮ ಹೆಸರು, ಊರು ಮತ್ತು ಮೊಬೈಲ್ ನಂಬರ್ ಬರೆದಿರಬೇಕು. ಫೆ.15ರ ಒಳಗೆ ವಾಟ್ಸಪ್ ಸಂಖ್ಯೆ 9740970840 ಬಂದ ಹತ್ತು ಕವನಗಳನ್ನು ಆಯ್ಕೆ ಮಾಡಿ ಮುಂದೆ ತಾಲೂಕಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆ ಹತ್ತು ಕವಿಗಳಿಗೆ ಕವನ ವಾಚನ ಮಾಡಲು ಅವಕಾಶ ನೀಡಲಾಗುವುದು. ಆಯ್ಕೆಗೊಳ್ಳುವ ಎಲ್ಲಾ ಕವನಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಕೊರ ತರಲಾಗುವುದು ಎಂದು ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.