ಕುಶಾಲನಗರ, ಫೆ.1: ಬಲಮುರಿ ಗಣಪತಿ ದೇವಾಲಯದ 25ನೇ ವಾರ್ಷಿಕೋತ್ಸವ ಹಾಗೂ 23ನೇ ವರ್ಷದ ಉತ್ಸವ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಪುರಸಭೆಯ ನೆಹರು ಬಡಾವಣೆಯಲ್ಲಿರುವ ದೇವಾಲಯದಲ್ಲಿ ಕಳೆದ 2 ದಿನಗಳಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಅರ್ಚಕರಾದ ಯೋಗೇಶ್ ಭಟ್‍ಮತ್ತು ಪ್ರಕಾಶ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು. ಹೋಮ ನಂತರ ತೀರ್ಥಪ್ರಸಾದ ವಿನಿಯೋಗ ನಡೆದು ಮಧ್ಯಾಹ್ನ ಮಹಾಮಂಗಳಾರತಿ ನಡೆದು ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಿಸಲಾಯಿತು.
ಕುಶಾಲನಗರ ದೇವಾಲಯ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲಗಳೊಂದಿಗೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಸಂಜೆ ಬಡಾವಣೆಗಳ ಮುಖ್ಯ ಬೀದಿಯಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ಮಂಗಳವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ದೇವಾಲಯ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಡಿ.ಜೆ.ರೇಣುಕುಮಾರ್, ಉಪಾಧ್ಯಕ್ಷರಾದ ಜೆ.ಶಿವರಾಮನ್, ಕಾರ್ಯದರ್ಶಿ ಕೆ.ವಿ.ಅರುಣ, ಖಜಾಂಚಿ ಬಿ.ಸಿ.ಆನಂದ ದೇವಾಲಯ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಎಂ.ಎನ್.ಚಂದ್ರಮೋಹನ್, ಉಪಾಧ್ಯಕ್ಷ ಕೆ.ರಾಮದಾಸ್, ಚಿಕ್ಕೆಗೌಡ, ಚೆಲುವರಾಜ್, ಜಗದೀಶ್, ಮಂಜುನಾಥ್ ದೇವಾಲಯಗಳ ಪ್ರತಿನಿಧಿಗಳು ಮತ್ತು ಬಲಮುರಿ ದೇವಸ್ಥಾನದ ಕಾರ್ಯಾಕಾರಿ ಮಂಡಳಿ ಸದಸ್ಯರು ಹಾಜರಿದ್ದರು.











