ಮಡಿಕೇರಿ ಫೆ.1 : ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಇತಿಹಾಸ ವಿಭಾಗ ಇವರ ಸಹಯೋಗದಲ್ಲಿ ‘ಚಾರಿತ್ರಿಕ ದಾಖಲೆಗಳಲ್ಲಿ ಕೊಡಗು ಜಿಲ್ಲೆಯ ಇತಿಹಾಸ’ ಎಂಬ ವಿಷಯದಲ್ಲಿ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ’ಕ್ಕೆ ಕಾಲೇಜು ಸಭಾಂಗಣದಲ್ಲಿ ಪದ್ಮಶ್ರೀ ಪುರಸ್ಕೃತ ರಾದ ಐಮುಡಿಯಂಡ ರಾಣಿ ಮಾಚಯ್ಯ ಚಾಲನೆ ನೀಡಿದರು.
ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕಿಂದು ನಗರದ ಪೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಪದ್ಮಶ್ರೀ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ, ಮುಂಬೈ ಮಹಿಳಾ ವಿಶ್ವ ವಿದ್ಯಾನಿಲಯ ಹಾಗೂ ಮಹಿಳಾ ಅಧ್ಯಯನ ಸಂಶೋಧನಾ ಕೇಂದ್ರದ ನಿರ್ದೇಶಕರಾದ ವೀಣಾ ಪೂಣಚ್ಚ, ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಮಡಿಕೇರಿ ಪ್ರಖ್ಯಾತ ಉದ್ಯಮಿ ಶಂಕರ ಪೂಜಾರಿಯಿಂದ ಚಾಲನೆ ನೀಡಲಾಯಿತು.
ವಿಚಾರ ಸಂಕಿರಣ ಅಂಗವಾಗಿ ಏರ್ಪಡಿಸಿದ್ದ ಅಜಯ್ ರಾವ್ ನಾಣ್ಯಗಳ ಪ್ರದರ್ಶನವನ್ನು ಅತಿಥಿಗಳಿಂದ ಉದ್ಘಾಟಿಸಿ ವೀಕ್ಷಿಸಿಸಲಾಯಿತು.
ತನ್ನದೇ ಆದ ಸಂಸ್ಕೃತಿಯನ್ನು ಹೊಂದಿರುವ ಕೊಡಗನ್ನು ವಿಭಿನ್ನ ರಾಜ ಮನೆತನಗಳು ಆಳ್ವಿಕೆ ಮಾಡಿವೆ. ರಮ್ಯ ರಮಣೀಯ ಸೌಂದ್ಯರ್ಯವನ್ನು ಹೊಂದಿರುವ ಕೊಡಗು ವಿಶೇಷ ಸಂಸ್ಕೃತಿಯ ಮೂಲಕ ದೇಶದಲ್ಲಿ ಗುರುತಿಸಿಕೊಂಡಿದೆ. ಕೊಡಗಿನ ವಿಶೇಷ ಕಲೆ ಯಾದ ಉಮ್ಮತ್ತಾಟ್ ನಿಂದ ಕೊಡಗು ದೇಶ -ವಿದೇಶದಲ್ಲಿ ಹೆಸರು ಮಾಡಿದೆ ಎಂದರು.
ಕೊಡಗಿನ ಮಕ್ಕಳು ಕೊಡಗಿನ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಕೊಡಗಿಗೆ ಏಳಿಗೆ ತರುವಲ್ಲಿ ಯಶಸ್ವಿಯಾಗಬೇಕು ಎಂದು ಪದ್ಮಶ್ರೀ ವಿಜೇತ ಐಮುಡಿಯಂಡ ರಾಣಿ ಮಾಚಯ್ಯ ಅವರು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಮೈಸೂರಿನ ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಅವರು ಮಾತನಾಡಿ ಚಾರಿತ್ರಿಕ ದಾಖಲೆ ಸಂಗ್ರಹಿಸಲು ಪ್ರತ್ಯೇಕ ಸಂಸ್ಥೆ ರಚನೆಯಾಗಬೇಕು. ಚಾರಿತ್ರಿಕ ದಾಖಲೆಗಳಿಂದಲೇ ಮುಂದಿನ ಪೀಳಿಗೆಯ ಅಭಿವೃದ್ಧಿ ಸಾಧ್ಯ. ಭಾರತಕ್ಕೆ ರಾಜ್ಯ ಪತ್ರಾಗಾರ ಇಲಾಖೆಯು ಒಂದು ಕೋಟಿ ಹತ್ತು ಲಕ್ಷ ದಾಖಲೆಗಳನ್ನು ಒದಗಿಸುವುದರಲ್ಲಿ ಮೇಲುಗೈ ಸಾಧಿಸಿರುವುದು ಒಂದು ವಿಶೇಷ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಮುಂಬೈ ಮಹಿಳಾ ವಿಶ್ವವಿದ್ಯಾನಿಲಯದ ಪ್ರಾಧ್ಯಫಕರು ಹಾಗೂ ನಿವೃತ್ತ ನಿರ್ದೇಶಕರಾದ ಡಾ.ವೀಣಾ ಪೂಣಚ್ಚ ಅವರು ಶ್ರಮಿಕ ವರ್ಗದ ಮಾತುಗಳನ್ನು ಕೇಳಬೇಕು ಎಂದು ತಿಳಿಸಿದರು.
ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪಾರ್ವತಿ ಅಪ್ಪಯ್ಯ ಅವರು ಮಾತನಾಡಿ ಚರಿತ್ರೆಯನ್ನು ತಿಳಿಯದೆ ನಮಗೆ ಏನೂ ಮಾಡಲ ಸಾಧ್ಯ. ಚರಿತ್ರೆಗೆ ಮೊದಲ ಆದ್ಯತೆ ನೀಡಬೇಕು. ಕೊಡವ ಭಾಷೆ ಯನ್ನು ಬೆಳೆಸಬೇಕಾದರೆ ಕೊಡವರ ಸಹಕಾರ ಅವಶ್ಯಕತೆ ಇದೆ. ಕೊಡವ ಭಾಷೆ ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವುದು ಒಂದು ವಿಶೇಷ ಸಂಗತಿಯಾಗಿದೆ. ದೇಶದಲ್ಲಿ ಕೊಡವರ ಆಚಾರ, ವಿಚಾರ ಮತ್ತು ಸಂಸ್ಕೃತಿಯನ್ನು ಉಳಿಸಬೇಕು ಎಂದು ತಿಳಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಡಾ.ಮೇಜರ್ ರಾಘವ ಪ್ರಾಸ್ತಾವಿಕವಾಗಿ ಮಾತನಾಡಿದರು.










