ಮಡಿಕೇರಿ ಫೆ.1 : ಇದೊಂದು ಮಾತಿನಲ್ಲೆ ಅರಮನೆ ಕಟ್ಟುವ ಬಜೆಟ್ ಆಗಿದೆ, ದೂರದ ಬೆಟ್ಟ ತೋರಿಸಿ ನುಣ್ಣಗೆ ಇದೆ ಎಂದು ಜನರನ್ನು ಮೂರ್ಖರನ್ನಾಗಿ ಮಾಡಲಾಗಿದೆ. ದೇಶದ ಮಲೆನಾಡು ಪ್ರದೇಶಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಜನಸಾಮಾನ್ಯರು ಹಾಗೂ ಕೃಷಿಕರಿಗೆ ಯಾವುದೇ ಲಾಭವಿಲ್ಲ, ಯೋಜನೆಗಳ ಬಗ್ಗೆ ಸ್ಪಷ್ಟತೆ ಇಲ್ಲ.
ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಲಾಗಿದೆ, ಆದರೆ ಕಳೆದ 9 ವರ್ಷಗಳಲ್ಲಿ ಎಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ ಮತ್ತು ಎಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎನ್ನುವ ಗುಟ್ಟನ್ನು ಸರ್ಕಾರ ಬಹಿರಂಗ ಪಡಿಸುತ್ತಿಲ್ಲ.
ಕೃಷಿಕ ವರ್ಗ ಮತ್ತು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಸ್ಪಷ್ಟವಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಘೋಷಿಸಿಲ್ಲ. ಪ್ರವಾಸೋದ್ಯಮದ ಯಾಪ್ ನ್ನು ಪರಿಚಯಿಸುವ ಕುರಿತು ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದು ಹಾಸ್ಯಾಸ್ಪದವಾಗಿದೆ. ಈ ಕಾರ್ಯವನ್ನು ಅಧಿಕಾರಿಗಳೇ ಮಾಡುತ್ತಾರೆ, ಘೋಷಣೆಗೊಂದು ಬಜೆಟ್ ವೇದಿಕೆ ಬೇಕಾಗಿರಲಿಲ್ಲ. (( ಕೆ.ಕೆ.ಮಂಜುನಾಥ್ ಕುಮಾರ್, ಅಧ್ಯಕ್ಷರು, ಕೊಡಗು ಜಿಲ್ಲಾ ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ))









