ಮಡಿಕೇರಿ ಫೆ.1 ಇದೊಂದು ನಿಷ್ಪ್ರಯೋಜಕ ಬಜೆಟ್ ಆಗಿದೆ, ಹಳೆಯ ಯೋಜನೆಗಳನ್ನೇ ಮುಂದುವರೆಸಲಾಗಿದೆ. ಒಂದೆರಡು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ, ಆದರೆ ಇದರ ಸಾಧಕ ಬಾಧಕಗಳನ್ನು ಬಹಿರಂಗ ಪಡಿಸಿಲ್ಲ. ಯೋಜನೆಗಳನ್ನು ಘೋಷಿಸಿದರೆ ಸಾಲದು ಜನಸಾಮಾನ್ಯರಿಗೆ ತಲುಪಬೇಕು.
ಬಜೆಟ್ ನ್ನು ಅವಲೋಕಿಸಿದಾಗ ಕೇಂದ್ರ ಸರ್ಕಾರವೇ ಗೊಂದಲದಲ್ಲಿದ್ದಂತ್ತಿದೆ, ಬ್ಯಾಲೆನ್ಸ್ ಮಾಡುವ ಸರ್ಕಸ್ ಮಾಡಿದೆ. ಇದರಿಂದ ಬಡವರು, ಕಾರ್ಮಿಕರು, ಕೃಷಿಕರು ಹಾಗೂ ಮಧ್ಯಮ ವರ್ಗದವರಿಗೆ ಯಾವುದೇ ಲಾಭವಿಲ್ಲ. (( ಟಿ.ಪಿ.ರಮೇಶ್, ಅಧ್ಯಕ್ಷರು, ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ))








