ಮಡಿಕೇರಿ ಫೆ.2 : ಕೇಂದ್ರ ಸರ್ಕಾರದ 2023 ರ ಬಜೆಟ್ ಪ್ರಗತಿಗೆ ಪೂರಕವಾಗಿದೆ. ಎಲ್ಲರನ್ನು ಒಳಗೊಂಡ ಅಭಿವೃದ್ಧಿ, ಕೊನೆಯ ಆರ್ಥಿಕ ಗುರಿ ತಲುಪುವುದು, ಮೂಲ ಸೌಕರ್ಯ ಹೂಡಿಕೆ, ಸಾಮರ್ಥ್ಯ ಬಲಪಡಿಸುವುದು, ಗ್ರೀನ್ ಡೆವಲಪ್ಮೆಂಟ್, ಯುವ ಶಕ್ತಿ ಹೀಗೆ ಸಪ್ತ ವಿಷಯಗಳ ಬಗ್ಗೆ ಗಮನ ಹರಿಸಿದೆ.
ಉದ್ಯೋಗ ಸೃಷ್ಟಿ ಗೆ 10 ಲಕ್ಷ ಕೋಟಿಗಳನ್ನು ಮೀಸಲಿಟ್ಟಿರುವುದು ಗಮನಾರ್ಹ. ಹಾಗೂ ಏಳು ಲಕ್ಷ ರೂ ಆದಾಯಕ್ಕೆ ತೆರಿಗೆಯಿಲ್ಲದಿರುವುದು ಮಧ್ಯಮವರ್ಗದವರಿಗೆ ಪ್ರಯೋಜನವಾಗಿದೆ. ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತಂದಿರುವುದು ಮತ್ತು ರಫ್ತು ಉತ್ತೇಜನ ಕಾರ್ಯಕ್ರಮಗಳು ಮಹತ್ವದ್ದಾಗಿದೆ. ಭಾರತವು ವಿಶ್ವದಲ್ಲಿಯೇ ಆರ್ಥಿಕತೆಯಲ್ಲಿ 5 ನೇ ಸ್ಥಾನವನ್ನು ಹೊಂದಿದ್ದು, ಈ ಬಜೆಟ್ ಮತ್ತಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲು ಪೂರಕವಾಗಿದೆ. (( ಬಿ. ಎನ್. ಶಾಂತಿಭೂಷಣ್, ಅರ್ಥಶಾಸ್ತ್ರ ಉಪನ್ಯಾಸಕರು. ಸೆಂಟ್ ಆನ್ಸ್ ಪದವಿ ಕಾಲೇಜು, ವಿರಾಜಪೇಟೆ ))