ಮಡಿಕೇರಿ ಫೆ.2 : ರಾಫೆಲ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಹಾಗೂ ಕಾಲೇಜು ಪ್ರಾಯೋಜಕತ್ವದಲ್ಲಿ ಕೊಂಡಂಗೇರಿ ಶಾಲಾ ಮೈದಾನದಲ್ಲಿ ಫೆ.23 ರಿಂದ 26 ವರೆಗೆ ನಡೆಯಲಿರುವ 14 ನೇ ವರ್ಷದ ಕೊಂಡಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಆಟಗಾರರ ಅರ್ಜಿಯನ್ನು 16 ತಂಡದ ನಾಯಕರಿಗೆ ಆಯೋಜಕರಾದ ಸಾಧಿಕ್ ಹಾಗೂ ಸಲೀಂ ಕೊಂಡಂಗೇರಿಯಲ್ಲಿ ವಿತರಿಸಿದರು.
ಕ್ರೀಡಾಕೂಟದಲ್ಲಿ ಕೊಂಡಂಗೇರಿ ಗ್ರಾಮದ 16 ತಂಡಗಳು ಭಾಗವಹಿಸುತ್ತಿದ್ದು, ಫೆ.23 ರಂದು ಉದ್ಘಾಟನಾ ಸಮಾರಂಭದಲ್ಲಿ ಕೊಂಡಂಗೇರಿಯ ಲೆಜೆಂಡ್ಸ್ ಎರಡು ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಫಾರಮ್ ವಿತರಣಾ ಕಾರ್ಯಕ್ರಮದಲ್ಲಿ ಕೊಂಡಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ನ 16 ತಂಡಗಳ ನಾಯಕರು ಭಾಗವಹಿಸಿದ್ದರು.







