ಮಡಿಕೇರಿ ಫೆ.3 : ಸುಂಟಿಕೊಪ್ಪ ಗ್ರಾ.ಪಂ ಮತ್ತು ಅಕ್ಷರ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಗ್ರಾ.ಪಂ ಮಟ್ಟದ ಗಣಿತ ಸ್ಪರ್ಧೆಯ 4ನೇ ತರಗತಿ ವಿಭಾಗದಲ್ಲಿ ಸುಂಟಿಕೊಪ್ಪ ಜಿ.ಎಂ.ಪಿ. ಶಾಲೆಯ ವಿದ್ಯಾರ್ಥಿನಿ ಹಂಸಿಕ ಪ್ರಥಮ ಸ್ಥಾನ ಪಡೆದಿದ್ದಾಳೆ.
ಗದ್ದೆಹಳ್ಳ ಜಿ. ಹೆಚ್. ಪಿ. ಶಾಲೆಯ ಜಸ್ಮಿತಾ ದ್ವಿತೀಯ ಮತ್ತು ಸನಾ ತೃತೀ ಯ ಸ್ಥಾನ ಗಳಿಸಿದ್ದಾರೆ.
5ನೇ ತರಗತಿ ವಿಭಾಗದಲ್ಲಿ ಸುಂಟಿಕೊಪ್ಪ ಜಿ. ಎಂ. ಪಿ. ಶಾಲೆಯ ಆಯಿಷಾ ಪ್ರಥಮ, ಪಂಚಮಿ ದ್ವಿತೀಯ ಮತ್ತು ಫಾತಿಮತ್ ಆನ್ ಶಿಫಾ ತೃತೀಯ ಸ್ಥಾನ ಪಡೆದರು.
6ನೇ ತರಗತಿ ವಿಭಾಗದಲ್ಲಿ ಸುಂಟಿಕೊಪ್ಪ ಜಿ. ಎಂ. ಪಿ. ಶಾಲೆಯ ಸುಜೈನ್ ಪ್ರಥಮ, ಮಹಮ್ಮದ್ ಅಜ್ಮಲ್ ದ್ವಿತೀಯ ಮತ್ತು ಗದ್ದೆಹಳ್ಳ ಜಿ. ಹೆಚ್. ಪಿ. ಶಾಲೆಯ ದೀಕ್ಷಿತ್ ತೃತೀಯ ಸ್ಥಾನ ಗಳಿಸಿರುವರು.