ಮಡಿಕೇರಿ ಫೆ.3 : ಮಡಿಕೇರಿ ನಗರಸಭಾ ನಾಮನಿರ್ದೇಶಿತ ಸದಸ್ಯ ಕವನ್ ಕಾವೇರಪ್ಪ ಹಾಗೂ ಹಿಂದೂ ಜಾಗರಣಾ ವೇದಿಕೆಯ ಹಿಂದೂ ವಾಹಿನಿಯ ಜಿಲ್ಲಾ ಸಂಚಾಲಕ್ ವಿನಯ್ ಕುಮಾರ್ ಅವರುಗಳನ್ನು ಗಡಿಪಾರು ಮಾಡುವ ಕುರಿತು ಪ್ರಸ್ತಾಪಿಸಿರುವ ಕ್ರಮವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಯಿತು.
ವಿಭಾಗ ಸಂಚಾಲಕ್ ಮಹೇಶ್, ಪ್ರಾಂತ ಸಮಿತಿಯ ಜೀವನ್, ಜಿಲ್ಲಾ ಸಮಿತಿಯ ಸುನಿಲ್ ಯೋಗೇಶ್, ಜೋಯಪ್ಪ, ಅನಿಲ್, ಶರತ್ ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.