ಮಡಿಕೇರಿ ಫೆ.4 : ಜೆಸಿಐ ಪೊನ್ನಂಪೇಟೆ ನಿಸರ್ಗಕ್ಕೆ ಆಯ್ಕೆಗೊಂಡಿರುವ 12ನೇ ಘಟಕಾಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭವು ಫೆ.6ರಂದು ಪೊನ್ನಂಪೇಟೆಯಲ್ಲಿ ಜರುಗಲಿದೆ.
ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಸಂಜೆ 6.30 ಕ್ಕೆ ಘಟಕದ 2022ನೇ ಸಾಲಿನ ಅಧ್ಯಕ್ಷರಾದ ಎ.ಪಿ.ದಿನೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆಸಿಐ ಸೆನೆಟರ್ ಭರತ್ ಎನ್ ಆಚಾರ್ಯ, ಗೌರವ ಅತಿಥಿಗಳಾಗಿ ಜೆಸಿಐ ಭಾರತದ ವಲಯ-14ರ ವಲಯ ಅಧ್ಯಕ್ಷರಾದ ಯಶಸ್ವಿನಿ ಹಾಗೂ ಜೆಸಿಐ ಭಾರತದ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್ (ಎಸ್ಎಂಎ) ಸಂಸ್ಥಾಪನಾ ರಾಷ್ಟ್ರೀಯ ಮಂಡಳಿಯ ಉಪಾಧ್ಯಕ್ಷ ಎ.ಎಸ್.ನರೇನ್ ಕಾರ್ಯಪ್ಪ, ಇಂಡಕ್ಷನ್ ಅಧಿಕಾರಿ ಜೆಸಿಐ ಭಾರತದ ವಲಯ-14ರಪ್ರಾಂತ್ಯದ ವಲಯ ಉಪಾಧ್ಯಕ್ಷ ಆಶಾ ಜೈನ್ ಪಾಲ್ಗೊಳ್ಳಲಿದ್ದಾರೆ.
ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ 12ನೇ ಘಟಕಾಡಳಿತ ಮಂಡಳಿಯ ಅಧ್ಯಕ್ಷರಾಗಿ ಮುಕ್ಕಾಟಿರ ನೀತ್ ಅಯ್ಯಪ್ಪ , ಕಾರ್ಯದರ್ಶಿಯಾಗಿ ಚೆಟ್ಟೋಳಿರ ಶರತ್ ಸೋಮಣ್ಣ, ಕೋಶಾಧಿಕಾರಿಯಾಗಿ ಬೊಜ್ಜಂಗಡ ಚೆಂಗಪ್ಪ. ಉಪಾಧ್ಯಕ್ಷರುಗಳಾಗಿ ಹೆಚ್.ಆರ್. ಸತೀಶ್ (ನಿರ್ವಹಣೆ), ಟಿ.ಜೆ. ಆಂಟೋನಿ (ತರಬೇತಿ), ಎ. ಎಮ್ ಬೋಪಣ್ಣ (ಅಭಿವೃದ್ಧಿ ಮತ್ತು ಬೆಳವಣಿಗೆ), ಪಿ.ಪಿ. ಬಿದ್ದಪ್ಪ (ಕಾರ್ಯಕ್ರಮ), ಕೆ.ಯು ತಿಮ್ಮಯ್ಯ (ವ್ಯವಹಾರ), ಪಿ.ಪಿ. ಬೋಪಣ್ಣ (Pಡಿ & ಮಾರ್ಕೆಟಿಂಗ್), ಜಂಟಿ ಕಾರ್ಯದರ್ಶಿಯಾಗಿ ಟಿ.ಎಸ್. ಸುಜಿತ್, ನಿರ್ದೇಶಕರಾಗಿ ಎಂ.ಪಿ.ಬೋಪಣ್ಣ , ಪಿ.ಬಿ. ಗೌತಮ್, ಸಿ.ಡಿ.ಮುತ್ತಪ್ಪ, ಜಿ.ಪಿ.ಸ್ವಾಮಿ, ಟಿ.ಜಿ.ಲಿಕಿತ್ ಕುಮಾರ್ ಹಾಗೂ ಜೂನಿಯರ್ ಜೇಸಿ ವಿಭಾಗದ ಮುಖ್ಯಸ್ಥರಾಗಿ ಎ.ಡಿ. ಚರಣ್ ಚಂಗಪ್ಪ ಅವರು ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಜೆಸಿಐ ಭಾರತದ ರಾಷ್ಟ್ರೀಯ ಮಂಡಳಿಯ ಉಪಾಧ್ಯಕ್ಷರಾದ ಜೆಸಿಐ ಸೆನೆಟರ್ ಭರತ್ ಎನ್ ಆಚಾರ್ಯ,ಜೆಸಿಐ ಭಾರತದ ವಲಯ-14ರ ವಲಯ ಅಧ್ಯಕ್ಷರಾದ ಯಶಸ್ವಿನಿ, ಜೆಸಿಐ ಭಾರತದ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್ (ಎಸ್ಎಂಎ) ಸಂಸ್ಥಾಪನಾ ರಾಷ್ಟ್ರೀಯ ಮಂಡಳಿಯ ಉಪಾಧ್ಯಕ್ಷರಾದ ಎ.ಎಸ್.ನರೇನ್ ಕಾರ್ಯಪ್ಪ, ಎಸ್ಎಂಎ ಸಂಸ್ಥಾಪನಾ ರಾಷ್ಟ್ರೀಯ ಮಂಡಳಿಯ ಸದಸ್ಯರಾದ ಕುಮಾರ್, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಶ್ರೀಮತಿ ಚಿಮ್ಮಚಿರ ಪವಿತ ರಜನ್ ಮತ್ತು ಮಾಜಿ ಗಡಿ ಭದ್ರತಾ ಪಡೆ ಎಲ್ಲಿ ಸೇವೆ ಸಲ್ಲಿಸಿರುವ ಶ್ರೀ ಅಪ್ಪಂಡೆರಂಡ ಪೆಮ್ಮಯ್ಯ ಅವರನ್ನು ಸಮಾರಂಭದಲ್ಲಿ ಗೌರವಿಸಲಾಗುವುದು ಎಂದು ಘಟಕದ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.