ಕುಶಾಲನಗರ ಫೆ.7 : ಸೇವಾ ಮನೋಭಾವ ಜನರ ಮನಸ್ಸಿನಿಂದ ಸೃಷ್ಟಿಯಾಗಬೇಕು ಎಂದು ರೋಟರಿ 3181 ಜಿಲ್ಲಾ ರಾಜ್ಯಪಾಲ ಪ್ರಕಾಶ್ ಕಾರಂತ್ ತಿಳಿಸಿದರು.
ಕುಶಾಲನಗರ ರೋಟರಿ ಸಂಸ್ಥೆಯ ಅಧಿಕೃತ ಭೇಟಿ ಕಾರ್ಯಕ್ರಮದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿ, ಸಂಘ ಸಂಸ್ಥೆಗಳ ಪ್ರಮುಖರುದಾನ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಕಾಯಕವನ್ನುಜನರಿಗೆ ತಿಳಿಸುವ ಮೂಲಕ ಇನ್ನೊಬ್ಬರಿಗೆ ಪ್ರೇರಣೆಯಾಗಬೇಕು ಎಂದ ಪ್ರಕಾಶ್‍ಕಾರಂತ್, ಸಮಾಜದ ಕೆಳಸ್ತರದ ಜನರಿಗೆ ಸಹಾಯ ಹಸ್ತ ಚಾಚುವ ಮನಸ್ಥಿತಿ ಹೊಂದಬೇಕೆಂದುಕರೆ ನೀಡಿದರು.
ಜನರೊಂದಿಗೆ ರೋಟರಿ ನಿರಂತರ ವಿಚಾರ ವಿನಿಮಯಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಉತ್ತಮ ಸಮಾಜದ ನಿರ್ಮಾಣದಗುರಿ ಹೊಂದಿದೆಎಂದರು. ಕೊಡುವ ಮನಸ್ಸಿನ ಮೂಲಕ ತೃಪ್ತಿ ಗಳಿಸಲು ಸಾಧ್ಯಎಂದು ತಿಳಿಸಿದ ಪ್ರಕಾಶ್ ಕಾರಂತ್ ರೋಟರಿ ದತ್ತಿ ನಿಧಿ ಮೂಲಕ ವಿಶ್ವದಾದ್ಯಂತ ನಿರಂತರ ಸೇವಾ ಕಾರ್ಯ ನಡೆಯುತ್ತಿದೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಆಮೆಮನೆ ಜರ್ನಾಧನ್, ಉದ್ಗಮ್ ಶಾಲೆಯ ಬ್ಯಾಡ್‍ಮಿಂಟನ್ ಕ್ರೀಡಾಪಟು ಕು.ಅನಿಶ್ ಎಸ್. ದೇವಾಡಿಗ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭ ತೊರೆನೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸ್ಟೀಲ್ ಬೊಟೆಲ್‍ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿಂದಿನ ರಾಜ್ಯಪಾಲ ಸುರೇಶ್‍ಚಂಗಪ್ಪ, ವಲಯ 6 ರ ಸಹಾಯಕ ರಾಜ್ಯಪಾಲ ಎಸ್.ಕೆ ಸತೀಶ್, ಜೋನಲ್ ಲೆಫ್ಟಿನೆಂಟ್‍ಎಂ.ಡಿ ಲಿಖಿತ್, ಕುಶಾಲನಗರ ರೋಟರಿ ಅಧ್ಯಕ್ಷ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಸುನೀತಾ ಮಹೇಶ್, ರೋಟರಿ ಹಿರಿಯ ಸದಸ್ಯರಾದ ಎ.ಎ ಚಂಗಪ್ಪ, ಶೋಭ ಸತೀಶ್, ಕ್ರಿಜ್ವಲ್‍ಕೋಟ್ಸ್, ಎಂ.ಡಿರಂಗಸ್ವಾಮಿ, ಡಾ. ಹರಿಶೆಟ್ಟಿ, ಸೇರಿದಂತೆ ಜಿಲ್ಲೆಯ ವಿವಿಧ ರೋಟರಿ ಸಂಸ್ಥೆಗಳ ಪ್ರಮುಖರು, ಸದಸ್ಯರು ಇದ್ದರು.