ಮಡಿಕೇರಿ ಫೆ.10 : ಹಾಕತ್ತೂರು ಯುವ ಸ್ಪಂದನ ಯೂತ್ ಫೌಂಡೇಶನ್ ವತಿಯಿಂದ ಫೆ.25, 26 ಹಾಗೂ 27 ರಂದು 3ನೇ ವರ್ಷದ ಸೂಪರ್ ಎಯ್ಟ್ (8 ಜನರ ತಂಡ) ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಪೌಂಡೇಶನ್‍ನ ಅಧ್ಯಕ್ಷ ಕೆ.ಎಂ.ಶಿವರಾಜ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಕತ್ತೂರು ಮೂರ್ನಾಡು ಮುಖ್ಯರಸ್ತೆ ಬಳಿಯ ಮುತ್ತಾರ್ಮುಡಿ ವಿಜಯಾನಂದ ಅವರ ಗದ್ದೆಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಸುಮಾರು 60ಕ್ಕೂ ಅಧಿಕ ತಂಡಗಳ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ವಿಜೇತ ತಂಡಕ್ಕೆ ಪ್ರಥಮ ಬಹುಮಾನ 33,333 ನಗದು, ಆಕರ್ಷಣೆ ಟ್ರೋಫಿ, ದ್ವಿತೀಯ ಬಹುಮಾನ 16666 ನಗದು, ಅಕರ್ಷಕ ಟ್ರೋಫಿ, ಸೆಮಿಫೈನಲ್ ಪ್ರವೇಶಿಸುವ ಉಳಿದ ಎರಡು ತಂಡಗಳಿಗೂ ಅಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಜತೆಗೆ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರಿಸ್, ಉತ್ತಮ ಬ್ಯಾಟ್ಸ್ ಮ್ಯಾನ್, ಉತ್ತರು ಬೌಲರ್ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಮೈದಾನ ಶುಲ್ಕ ರೂ.2500 ನಿಗಧಿಪಡಿಸಲಾಗಿದ್ದು, ಆಸಕ್ತ ತಂಡಗಳು ಮುಂಗಡವಾಗಿ ರೂ.500 ಪಾವತಿಸಿ ತಂಡದ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಿದ ಅವರು, ಹೆಚ್ಚಿನ ಮಾಹಿತಿಗಾಗಿ ಮಹೇಶ್ 7899226915, ಬಾಲಕೃಷ್ಣ 9901327236, ಸಂಪರ್ಕಿಸಬಹುದು ಎಂದರು.
ಯುವ ಸ್ಪಂದನ ಯೂತ್ ಪೌಂಡೇಶನ್ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಈ ಹಿಂದೆ ಸ್ವಚ್ಛತಾ ಅಭಿಯಾನ, ವಿದ್ಯಾರ್ಥಿಗಳಿಗೆ ಕಾಲೇಜಿನ ಶುಲ್ಕ, ಹಾಸಿಗೆ ಹಿಡಿದ ರೋಗಿಗೆ ಔಷಧ ವ್ಯವಸ್ಥೆ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್‍ನ ಹಾಕತ್ತೂರು ಸಂಘಟನೆಯ ಸದಸ್ಯರಾದ ದೀಪಕ್ ನಾಯ್ಡು, ಮನೋಜ್ ದೇರಾಜೆ, ಚೇತನ್ ತೆಕ್ಕಡೆ, ಪ್ರವೀಣ್ ಹಾಜರಿದ್ದರು.











