ಮಡಿಕೇರಿ ಫೆ.10 : ಅಹ್ಮದಿಯಾ ಮುಸ್ಲಿಂ ಜಮಾಅತ್ ವತಿಯಿಂದ “3ನೇ ಮಹಾಯುದ್ಧವನ್ನು ನಿಲ್ಲಿಸಿ” ಎಂಬ ವಿಷಯದಡಿ ಭಾರತದ ವಿವಿಧೆಡೆ ಶಾಂತಿಯುತ ಅಭಿಯಾನ ನಡೆಯುತ್ತಿದ್ದು, ಇದರ ಭಾಗವಾಗಿ ಮಡಿಕೇರಿ ನಗರದಲ್ಲೂ ಜಾಗೃತಿ ಕಾರ್ಯಕ್ರಮ ಫೆ.11 ರಂದು ನಡೆಯಲಿದೆ ಎಂದು ಸಂಘಟನೆಯ ಮಡಿಕೇರಿಯ ಅಧ್ಯಕ್ಷ ಜಿ.ಎಂ.ಮೊಹಮ್ಮದ್ ಷರೀಫ್ ತಿಳಿಸಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ವಿಶ್ವದ ಶಾಂತಿ ಮತ್ತು ಭದ್ರತೆಗೆ ಆದ್ಯತೆ ನೀಡುವ ಅಂಶಗಳನ್ನು ಪ್ರಸ್ತಾಪಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
20ನೇ ಶತಮಾನದಲ್ಲಿ ಘಟಿಸಿದ ಎರಡು ವಿನಾಶಕಾರಿ ವಿಶ್ವ ಯುದ್ಧಗಳಿಂದ ಪಾಠಗಳನ್ನು ಕಲಿಯಬೇಕು ಎಂದು ಅಹ್ಮದಿಯಾ ಮುಸ್ಲಿಂ ಜಮಾಅತಿನ ಜಾಗತಿಕ ನೇತಾರ ಹಝ್‍ರತ್ ಮಿರ್ಝಾ ಮಸ್‍ರೂರ್ ಅಹ್ಮದ್ ಸಾಹಿಬ್ ಹಲವು ವರ್ಷಗಳಿಂದ ಲೋಕದ ಪ್ರಮುಖ ರಾಷ್ಟ್ರಗಳಿಗೆ ಮುನ್ನೆಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.
Breaking News
- *ಜ.5 ರಂದು ಪತ್ರಕರ್ತರ ಕ್ರಿಕೆಟ್ ಕಲರವ : ಆಟಗಾರರ ಪಟ್ಟಿ ಬಿಡುಗಡೆ*
- *ಮಡಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಸಂವಿಧಾನ ದಿನಾಚರಣೆ : ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ : ಸಿವಿಲ್ ನ್ಯಾಯಾಧೀಶೆ ಶುಭ*
- *ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಗುರುತಿನ ಚೀಟಿ ವಿತರಣೆ : ಜನಸಾಮಾನ್ಯರಿಗೆ ಕಾನೂನು ಅರಿವು ಮತ್ತು ನೆರವು ಕಲ್ಪಿಸಿ : ನ್ಯಾಯಾಧೀಶ ಹೊಸಮನಿ ಪುಂಡಲೀಕ ಸಲಹೆ*
- *ಬಸವನಹಳ್ಳಿ ವಸತಿ ಶಾಲೆಯಲ್ಲಿ ನಾಟಕ ಶಿಬಿರ*
- *ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ*
- *ಚಿರತೆ ಸೆರೆಗೆ ಸೂಚನೆ*
- *ಕರಿಕೆ- ಭಾಗಮಂಡಲ ಹೆದ್ದಾರಿ ಕಾಮಗಾರಿಗೆ ಚಾಲನೆ : ಮೂಲಭೂತ ಸೌಲಭ್ಯ ಒದಗಿಸುವ ಭರವಸೆ ನೀಡಿದ ಶಾಸಕ ಪೊನ್ನಣ್ಣ*
- *ಮೂರ್ನಾಡಿನಲ್ಲಿ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ*
- *ಪ್ರಧಾನಿಯನ್ನು ಭೇಟಿಯಾದ ಸಿಎಂ, ಡಿಸಿಎಂ : ವಿವಿಧ ಬೇಡಿಕೆಗಳ ಮನವಿ ಸಲ್ಲಿಕೆ*
- *ಅಭಿವೃದ್ದಿಯಲ್ಲಿ ರಾಜಕಾರಣ ಮಾಡಲಾರೆ : ಶಾಸಕ ಎ.ಎಸ್.ಪೊನ್ನಣ್ಣ*