ಮಡಿಕೇರಿ ಫೆ.13 : ಅಯ್ಯಂಗೇರಿ ಗ್ರಾಮದ ಇತಿಹಾಸ ಪ್ರಸಿದ್ಧ ಹಳೇ ಪಳ್ಳಿ ನೇರ್ಚೆ (ಉರೂಸ್) ಹಾಗೂ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ ಫೆ.15 ರಿಂದ 17 ವರೆಗೆ ನಡೆಯಲಿದೆ ಎಂದು ಮಸೀದಿ ಆಡಳಿತ ಮಂಡಳಿ ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಫೆ.15 ರಂದು ಬೆಳಗ್ಗೆ ಅಯ್ಯಂಗೇರಿ ಮುಸ್ಲಿಂ ಜಮಾಹತ್ ಅಧ್ಯಕ್ಷ ಸಯ್ಯದ್ ಅಬ್ದುಲ್ ಖಾದರ್ ತಂಙಲ್ ಧ್ವಜಾರೋಹಣದ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ರಾತ್ರಿ 7 ಗಂಟೆಗೆ ಲುಖ್ ಮಾನುಲ್ ಹಕೀಂ ಸಖಾಫಿ ಪುಲ್ಲಾರ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಫೆ.16 ಮಧ್ಯಾಹ್ನ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ಮುಖ್ಯ ಪ್ರಭಾಷಣವನ್ನು ಶಾಫಿ ಸಹದಿ ಸೋಮವಾರಪೇಟೆ ಮಾಡಲಿದ್ದಾರೆ.
ರಾತ್ರಿ 7 ಗಂಟೆಗೆ ಧಾರ್ಮಿಕ ಪ್ರವಚನ ನಡೆಯಲಿದ್ದು, ಮುಖ್ಯ ಪ್ರಭಾಷಣವನ್ನು ಜಬ್ಬಾರ್ ಸಖಾಫಿ ಪಾತೂರ್ ಮಾಡಲಿದ್ದಾರೆ.
ಫೆ.17 ರಾತ್ರಿ 7 ಗಂಟೆಗೆ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮ ನಡೆಯಲಿದ್ದು, ಸಯ್ಯಿದ್ ಮಹ್ರೂಫ್ ಜಿಫ್ರಿ ತಂಙಲ್ ಕಲ್ಲಿಡಿಕೋಡ್ ನೇತೃತ್ವ ವಹಿಸಲಿದ್ದಾರೆ.
ಮಧ್ಯಾಹ್ನ 2.30 ಗಂಟೆಗೆ ಮೌಲಿದ್ ಪಾರಾಯಣದ ನಂತರ ಅನ್ನದಾನ ನಡೆಯಲಿದೆ ಎಂದು ಮಸೀದಿ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.