ಮಡಿಕೇರಿ ಫೆ.13 : ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆಯುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ನಲ್ವತ್ತು ಏಕ್ರೆ ಜಂಕ್ಷನ್ ನಲ್ಲಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಕೊಡಗು ಡಿಸಿಆರ್ ಬಿ ಅಪರಾಧ ಸಿಬ್ಬಂದಿ ಹಾಗೂ ಸಿದ್ದಾಪುರ ಪೊಲೀಸರು ದಾಳಿ ನಡೆಸಿದರು.
ನೆಲ್ಲಿಹುದಿಕೇರಿಯ ಕುಂಬಾರಗುಂಡಿ ನಿವಾಸಿ ಎ.ಅಸೀಬ್ (24) ನಲ್ವತ್ತು ಏಕ್ರೆಯ ಮೋಹನ್ ಎ.ಬಿ (27) ಹಾಗೂ ನಾಪೋಕ್ಲು ಎಮ್ಮೆಮಾಡು ಗ್ರಾಮದ ಮೊಹಮ್ಮದ್ ಆಸೀಪ್ (27) ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಗೊಳಪಡಿಸಿದ್ದಾರೆ.
ಆರೋಪಿಗಳ ಬಳಿ ಇದ್ದ 1.197 ಕೆ.ಜಿ.ಗಾಂಜಾ, 6,270 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ಅಂದಾಜು 1.90 ಲಕ್ಷ ರೂ. ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್.ಸುಂದರರಾಜ್ ಹಾಗೂ ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಜಗದೀಶ್ ಮಾರ್ಗದರ್ಶನದಲ್ಲಿ ಪೊಲೀಸ್ ಅಧಿಕಾರಿಗಳಾದ ನಾಗೇಶ್ ಕದ್ರಿ, ದಿಲೀಪ್ ಕುಮಾರ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ಯೊಗೇಶ್ ಕುಮಾರ್, ನಿರಂಜನ್, ವಸಂತ, ಸುರೇಶ್, ಶರತ್ ರೈ, ಶಶಿಕುಮಾರ್, ಸಿದ್ದಾಪುರ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಬೆಳ್ಳಿಯಪ್ಪ, ಲಕ್ಷ್ಮೀ ಕಾಂತ್, ಸತೀಶ್ ಎ.ಯು, ವಸಂತ, ಸಿಡಿಆರ್ ನ ರಾಜೇಶ್ ಹಾಗೂ ಪ್ರವೀಣ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.














