ಮಡಿಕೇರಿ ಫೆ.14 : ಮೈಸೂರಿನ ಮಹಾರಾಜ ಇಂಡೋರ್ ಹಾಲ್ನಲ್ಲಿ ನಡೆದ ವಿ.ಎಸ್.ಕೆ. ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿ.ಆರ್.ವರ್ಷ ಕಟ್ಟಾ ವಿಭಾಗದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ವರ್ಷ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ತರಬೇತುದಾರ ಬಿ.ಎಂ. ಮುಖೇಶ್ ಅವರ ಬಳಿ ತರಬೇತಿ ಪಡೆದಿದ್ದಾಳೆ. ಇವಳು ಬೋಯಿಕೇರಿಯ ರವಿ ಮತ್ತು ಶೈಲಜ ದಂಪತಿಗಳ ಪುತ್ರಿ.







