ನಾಪೋಕ್ಲು ಫೆ.16 : ಕುಂಜಿಲ ಕಕ್ಕಬೆ ಗ್ರಾ.ಪಂ ವ್ಯಾಪ್ತಿಯ ಮರಂದೊಡ ಗ್ರಾಮದ ನಿವಾಸಿ ಬಾರಿಕೆ ಆರ್. ಮಾದಪ್ಪ(71) ಅವರು ತಿರುಪತಿ ದರ್ಶನದ ಸಮಯದಲ್ಲಿ ಕುಟುಂಬದವರಿಂದ ಫೆ.12ರ ಮುಂಜಾನೆ ಆಕಸ್ಮಿಕವಾಗಿ ಬೇರ್ಪಟ್ಟು ನಾಪತ್ತೆಯಗಿರುತ್ತಾರೆ. ಈ ಸಂದರ್ಭ ಬಿಳಿ ಚೆಕ್ಸ್ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಕೊಡಗಿನಿಂದ ತಿರುಪತಿಗೆ ಹೋಗುವವರು/ಹೋಗಿರುವವರು ಇವರ ಸುಳಿವು ಸಿಕ್ಕಿದ ತಕ್ಷಣ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ.
ದೂರವಾಣಿ: 9008584767, 8105491545, 9731295363
(ವರದಿ : ದುಗ್ಗಳ ಸದಾನಂದ)














