ಮಡಿಕೇರಿ ಫೆ.20 : ನಗರದ ಬ್ರಹ್ಮಕುಮಾರಿ ಲೈಟ್‍ಹೌಸ್‍ನಲ್ಲಿ ಮಹಾಶಿವರಾತ್ರಿಯ ಅಂಗವಾಗಿ ವಿಶೇಷ ದ್ಯಾನ ಕಾರ್ಯಕ್ರಮ ನಡೆಯಿತು.
ಲಾಮಕ್ಯಾಬ್ರ ದಿಂದ ಗುರೂಜಿ ಆಗಮಿಸಿ ವಿಶೇಷ ದ್ಯಾನದ ಮೂಲಕ ಹಾಗೂ ತಮ್ಮ ಭಕ್ತ ಸಮೂಹಕ್ಕೆ ಪರಮಾತ್ಮ ಶಿವನ ವಿಶೇಷ ಗುಣ ಗಾಯನ ಮಾಡಿದರು.
ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಮ್ಮ ಪತ್ನಿ, ಮಗುವಿನೊಂದಿಗೆ ಆಗಮಿಸಿ ಜ್ಯೋತಿರ್ಲಿಂಗ ದರ್ಶನ ಪಡೆದರು.
ನಂತರ ಮಾತನಾಡಿದ ಅವರು, ಸಮಾಜದ ಶಾಂತಿ ಸ್ಥಾಪನೆಯಲ್ಲಿ ಬ್ರಹ್ಮಕುಮಾರಿಯರ ಸೇವೆ ಶ್ಲಾಘನೀಯ ಎಂದರು.
ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿಜೀ ಅವರು ಓಂ ಧ್ವನಿಯ ಮುಖಾಂತರ ನೆರೆದಿದ್ದ ಎಲ್ಲರಿಗೂ ಪರಮಾತ್ಮ ಶಿವನ ಅನುಭೂತಿ ಮಾಡಿಸಿದರು.
ವಿಶೇಷ ಸಾಮೂಹಿಕ ಯೋಗದಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಸಾದ್ ವಿತರಿಸಲಾಯಿತು.