ಮಡಿಕೇರಿ ಫೆ.20 : ವಿಜಯ ಕರ್ನಾಟಕ ಮೈಸೂರು ಬ್ಯುರೋ ಸ್ಥಾನಿಕ ಸಂಪಾದಕ ಐತಿಚೆಂಡ ರಮೇಶ್ ಉತ್ತಪ್ಪ ಅವರ ಸಹೋದರ , ಮಾಜಿ ಯೋಧ ಐತಿಚಂಡ ತಿಮ್ಮಯ್ಯ (55) ಸೋಮವಾರ ನಿಧನರಾದರು.
ಶ್ರೀಲಂಕಾದಲ್ಲಿ ಇಂಡಿಯನ್ ಪೀಸ್ ಕೀಪಿಂಗ್ ಫೋರ್ಸ್‌ನಲ್ಲಿ LTTE ವಿರುದ್ಧ ಹಾಗೂ ಅಮೃತಸರ ಆಪರೇಷನ್ ಬ್ಲೂಸ್ಟಾರ್ ನಲ್ಲಿ ತಿಮ್ಮಯ್ಯ ಭಾಗವಹಿಸಿದ್ದರು.
ಸಿಯಾಚಿನ್ ಸೇರಿದಂತೆ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಸ್ವಗ್ರಾಮ ಕರಡದಲ್ಲಿ ನಾಳೆ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.