ಮಡಿಕೇರಿ ಫೆ.22 : ಅಮ್ಮತ್ತಿ ಗ್ರಾಮದ ಗ್ರಾಮದ ಪೊಲೀಸ್ ವೆಂಕಟೇಶ್ ಅವರ ಮನೆಯ ಅಂಗಳದಲ್ಲಿ ಇದ್ದ ನಾಗರಹಾವನ್ನು ಉರಗ ರಕ್ಷಕ ರೋಶನ್ ರಕ್ಷಿಸಿದ್ದಾರೆ.
ವೆಂಕಟೇಶ್ ಅವರು ಹಾವು ಇರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ರೋಶನ್ ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಮಾಲ್ತಾರೆ ಅರಣ್ಯಕ್ಕೆ ಬಿಟ್ಟರು.
ರೋಶನ್ ಎರಡು ಸಾವಿರಕ್ಕಿಂತಲೂ ಅಧಿಕ ಹಾವನ್ನು ರಕ್ಷಣೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಹಾವುಗಳು ಕಂಡರೆ ಈ 7022373921 ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.








