ನಾಪೋಕ್ಲು ಫೆ.24 : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ಇಂದಿನಿಂದ ಒಂದು ವಾರಗಳ ಕಾಲ ನಡೆಯಲಿದ್ದು ಎಮ್ಮೆಮಾಡು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ವಾಹನ ಮತ್ತು ಜನದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು.
ಎಮ್ಮೆಮಾಡು ಜಮಾಯತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿವೈಎಸ್ಪಿ ಜಗದೀಶ್ ,ವೃತ್ತ ನಿರೀಕ್ಷಕ ಶೇಖರ್,ನಾಪೋಕ್ಲು ಠಾಣೆಯ ಪ್ರಭಾರ ಠಾಣಾಧಿಕಾರಿ ಗೋಪಾಲಕೃಷ್ಣ, ಎಮ್ಮೆಮಾಡು ಜಮಾಯತ್ ಅಧ್ಯಕ್ಷ ಅಬೂಬಕರ್ ಸಖಾಫಿ ಸೇರಿದಂತೆ ಹಲವರು ಪಾಲ್ಗೊಂಡಿದ್ದು, ಉರೂಸ್ ಅನ್ನು ಸುವ್ಯವಸಿತವಾಗಿ ನಡೆಸುವ ಬಗ್ಗೆ
ಕುಲಂಕುಶವಾಗಿ ಚರ್ಚಿಸಿ ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭ ಜಮಾಯತ್ ಕಾರ್ಯದರ್ಶಿ ಪಿ.ಕೆ. ಹ್ಯಾರೀಸ್, ಖಜಾಂಚಿ ಆಲಿಕುಟ್ಟಿ ನೆರೋಟ್, ಬಿ.ಎಂ.ಉಸ್ಮಾನ್ ಹಾಜಿ, ಬಿ.ಎಂ.ಉಮರ್ ಮುಸ್ಲಿಯರ್, ಅಬ್ದುಲ್ ಹಮೀದ್ ನೆರೋಟ್, ಕಾಳೆರ ಖಾದರ್ ಇನ್ನಿತರ ಉಪಸ್ಥಿತರಿದ್ದರು.
ವರದಿ —- ದುಗ್ಗಳ ಸದಾನಂದ