ಮಡಿಕೇರಿ ಫೆ.24 : ಪ್ರಸಕ್ತ(2022-23) ಸಾಲಿನಲ್ಲಿ ಜಿಲ್ಲೆಯ ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳ ವಿತರಣೆ ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಂದ ಗಾರೆಕೆಲಸ ಹಾಗೂ ಮರಗೆಲಸ(ಬಡಗಿ) ಉಪಕರಣಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ನಿಗಧಿತ ಅರ್ಜಿ ನಮೂನೆಯನ್ನು ಕಚೇರಿಯಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ದಾಖಲೆಗಳ ವಿವರ; ಗ್ರಾಮ ಪಂಚಾಯತಿ ಪಿಡಿಒ ಅವರಿಂದ ಕಸುಬು ದೃಡೀಕರಣ ಪತ್ರ, ಕಾರ್ಮಿಕ ಇಲಾಖೆಯಿಂದ ಉಪಕರಣವನ್ನು ಪಡೆದಿಲ್ಲವೆಂದು ದೃಡೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್ ಪ್ರತಿ ಸಲ್ಲಿಸಬೇಕು.
ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ್, 09 ರೊಳಗೆ ಉಪ ನಿರ್ದೇಶಕರು(ಖಾಗ್ರಾ), ಗ್ರಾಮೀಣ ಕೈಗಾರಿಕಾ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ-571201 ಈ ವಿಳಾಸಕ್ಕೆ ಸಲ್ಲಿಸಬೇಕು. ನಿಗಧಿತ ಸಮಯದ ನಂತರ ಬಂದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ರಘು ಸಿ.ಎನ್, ಉಪ ನಿರ್ದೇಶಕರು(ಖಾಗ್ರಾ), ಗ್ರಾಮೀಣ ಕೈಗಾರಿಕೆ ರವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು(ಖಾಗ್ರಾ), ಗ್ರಾಮೀಣ ಕೈಗಾರಿಕೆ ಕಚೇರಿಯ ದೂರವಾಣಿ ಸಂಖ್ಯೆ:08272-228113 ಗೆ ಕರೆಮಾಡಿ ಮಾಹಿತಿಯನ್ನು ಪಡೆಯಬಹುದು ಎಂದು ಗ್ರಾಮೀಣ ಕೈಗಾರಿಕಾ ವಿಭಾಗದ ಉಪ ನಿರ್ದೇಶಕರು(ಖಾಗ್ರಾ) ಸಿ.ಎನ್.ರಘು ಅವರು ಕೋರಿದ್ದಾರೆ.















