ಮಡಿಕೇರಿ ಫೆ.25 : ದೇಶಪ್ರೇಮ ಎಂಬುದು ಪ್ರತೀಯೋವ೯ ಭಾರತೀಯನ ಮನಸ್ಸಿನಲ್ಲಿಯೂ ಹಾಸುಹೊಕ್ಕಾಗಬೇಕು. ಭಾರತ ದೇಶದ ಹಿರಿಮೆಯನ್ನು ಪ್ರತೀಯೋವ೯ರೂ ಗೌರವಿಸುವಂತಾಗಬೇಕು ಎಂದು ರೋಟರಿ ಜಿಲ್ಲೆ 3181 ನ ಗವನ೯ರ್ ಪ್ರಕಾಶ್ ಕಾರಂತ್ ಹೇಳಿದ್ದಾರೆ.
ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿರುವ ಅಮರ್ ಜವಾನ್ ಸ್ಮಾರಕದಲ್ಲಿ ಆಯೋಜಿತ ದೇಶಪ್ರೇಮ ಕುರಿತ ರೋಟರಿ ಜಿಲ್ಲಾ ಕಾಯ೯ಕ್ರಮದಲ್ಲಿ ನಿವೃತ್ತ ಸೇನಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಪ್ರಕಾಶ್ ಕಾರಂತ್, ಯುವಪೀಳಿಗೆಯಲ್ಲಿ ದೇಶಪ್ರೇಮ ಮೂಡಿಸುವಂತ ಕಾಯ೯ಕ್ರಮಗಳು ಹೆಚ್ಚು ಹೆಚ್ಚು ಆಯೋಜಿತವಾಗಬೇಕು. ಭಾರತದ ಅಪ್ರತಿಮ ಸೇನಾಧಿಕಾರಿಗಳನ್ನು ಯುವಪೀಳಿಗೆಗೆ ಪರಿಚಯಿಸುವ ಯೋಜನೆಗಳು ನಡೆಯಬೇಕು ಎಂದರಲ್ಲದೇ, ಈ ನಿಟ್ಟಿನಲ್ಲಿ ರೋಟರಿ ಜಿಲ್ಲೆ 3181 ಮಂಗಳೂರಿನಿಂದ ಮೈಸೂರಿನವರೆಗೆ ದೇಶಪ್ರೇಮ ಬಿಂಬಿಸುವ ಸಂದೇಶ ಸಾರುವ ವಾಹನ ಜಾಥಾ ಆಯೋಜಿಸಿದ್ದು, 30 ರೋಟರಿ ಸದಸ್ಯರು ಪಾಲ್ಗೊಂಡಿದ್ದಾರೆ ಎಂದರು.
ಭಾರತದ ಅಪ್ರತಿಮ ಸೇನಾ ನಾಯಕ ಜನರಲ್ ತಿಮ್ಮಯ್ಯ ನೆನಪುಗಳನ್ನು ಹೊಂದಿರುವ ಭವನವಾದ ತಿಮ್ಮಯ್ಯ ಮ್ಯೂಸಿಯಂಗೆ ರೋಟರಿ ಸದಸ್ಯರ ಭೇಟಿ ಸಾಥ೯ಕತೆ ಮೂಡಿಸಿದೆ. ಪ್ರತೀಯೋವ೯ ದೇಶಪ್ರೇಮಿಯೂ ಈ ಸ್ಮಾರಕ ಭವನಕ್ಕೆ ಭೇಟಿ ನೀಡಿದಾಗ ಖಂಡಿತಾ ದೇಶಪ್ರೇಮ ವೃದ್ಧಿಸುತ್ತದೆ ಎಂದೂ ಪ್ರಕಾಶ್ ಕಾರಂತ್ ಹೇಳಿದರು.
ಮಡಿಕೇರಿ ರೋಟರಿ ಸಂಸ್ಥೆ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ , ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನಿವೃತ್ತ ಮೇಜರ್ ವೆಂಕಟಗಿರಿ ಮತ್ತು ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿರಾಜಪೇಟೆಯ ಮೇಜರ್ ಎಸ್.ವೆಂಕಟಗಿರಿ, ಓವ೯ ಸೈನಿಕ ಪ್ರಾಣ ಕೊಡಲೆಂದೇ ಸೈನ್ಯಕ್ಕೆ ಸೇರುವುದಿಲ್ಲ. ಆದರೆ ಸೇನೆ ಸೇರಿದ ನಂತರ ತನ್ನ ದೇಶಕ್ಕಾಗಿ ನಿಜವಾದ ಸೈನಿಕ ಪ್ರಾಣ ನೀಡಲೂ ಹಿಂಜರಿಯುವುದಿಲ್ಲ. ಇದೇ ನಿಜವಾದ ದೇಶಭಕ್ತಿ ಎಂದರು. ಯೋಗೇಂದ್ರ ಸಿಂಗ್ ಯಾದವ್ ಎಂಬ 18 ವಷ೯ದ ಯುವಕ ತನಗೆ 18 ಗುಂಡಿನೇಟುಗಳು ಕಾಲಿಗೆ ಬಿದ್ದಾಗಲೂ ದೇಶಕ್ಕಾಗಿ ಹೋರಾಡಿದ. ಚೀನಾ ಗಡಿಯ ತವಾಂಗ್ ನಲ್ಲಿ ಭಾರತೀಯ ಸೈನಿಕರು ಕ್ಷಣಕ್ಷಣವೂ ಪ್ರಾಣ ರಕ್ಷಣೆ ಮಾಡುತ್ತಲೇ ದೇಶ ರಕ್ಷಣೆ ಮಾಡುತ್ತಾ ಬಂದಿದ್ದಾರೆ. ಇಂಥ ವೀರ ಸೈನಿಕ ರು ನಮಗೆ ಆದಶ೯ವಾಗಬೇಕೆಂದು ಹೇಳಿದರು. ನಮ್ಮ ದೇಶ ನಮಗೆ ಅನ್ನ ನೀಡುವ ತಾಯಿ ಎಂಬ ಮನೋಭಾವ ನಮ್ಮಲ್ಲಿ ಮೂಡಬೇಕೆಂದು ವೆಂಕಟಗಿರಿ ಹೇಳಿದರು. ರೋಟರಿಯಂಥ ಸಂಸ್ಥೆಗಳು ಸಾಮಾಜಿಕ ಸೇವಾ ಕಾಯ೯ಗಳ ಮೂಲಕ ದೇಶಕ್ಕಾಗಿ ಮಹತ್ವದ ಕೊಡುಗೆ ನೀಡುತ್ತಿದೆ ಎಂದೂ ಮೇಜರ್ ವೆಂಕಟಗಿರಿ ಶ್ಲಾಘೀಸಿದರು.
ನಿವೃತ್ತ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಮಾತನಾಡಿ, ಭಾರತೀಯರು ಸುರಕ್ಷಿತ ಜೀವನ ನಡೆಸುವಲ್ಲಿ ನಮ್ಮ ಹೆಮ್ಮೆಯ ವೀರಸೈನಿಕರ ಕೊಡುಗೆಯಿದೆ ಎಂದರು. ಪ್ರಸ್ತುತ ಭಾರತಕ್ಕೆ ದೇಶದ ಹೊರಗಿನ ಶತ್ರುಗಳಿಗಿಂತ ದೇಶದ ಒಳಗಿನ ಗುಪ್ತ ಶತ್ರುಗಳ ವಿರುದ್ದ ಹೋರಾಡುವುದೇ ಸವಾಲಾಗಿದೆ ಎಂದೂ ಅವರು ಹೇಳಿದರು.
ಕಾಶ್ಮೀರದಲ್ಲಿ ಭಾರತೀಯ ಸೈನಿಕರ ಅನೇಕ ವಷ೯ಗಳ ಪರಿಶ್ರಮದಿಂದಾಗಿಯೇ ಇಂದು ಅಲ್ಲಿನವರು ನೆಮ್ಮದಿಯ ಜೀವನ ನಡೆಸಲು ಕಾರಣವಾಗಿದೆ ಎಂದರಲ್ಲದೇ, ತಾನು ಕಾಶ್ಮೀರದಲ್ಲಿ ಸಲ್ಲಿಸಿದ ಸೇನಾ ಕತ೯ವ್ಯದ ದಿನಗಳು, ಪಂಡಿತರ ಹತ್ಯೆಯ ಘಟನೆಗಳನ್ನು ಸ್ಮರಿಸಿಕೊಂಡರು.
ಕಾಯ೯ಕ್ರಮದಲ್ಲಿ ರೋಟರಿ ಸಹಾಯಕ ಗವನ೯ರ್ ರತನ್ ತಿಮ್ಮಯ್ಯ ಸ್ವಾಗತಿಸಿ, ಪಬ್ಲಿಕ್ ಇಮೇಜ್ ಜಿಲ್ಲಾ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ನಿರೂಪಿಸಿ ವಂದಿಸಿದರು. ಮಡಿಕೇರಿ ರೋಟರಿ ಅಧ್ಯಕ್ಷ ಕೆ.ಕಾಯ೯ಪ್ಪ, ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾಯ೯ದಶಿ೯ ಪ್ರಮೋದ್ ಕುಮಾರ್ ರೈ, ರೋಟರಿ ವುಡ್ಸ್ ಕಾಯ೯ದಶಿ೯ ವಸಂತ್ ಕುಮಾರ್ ನಿವ೯ಹಿಸಿದರು.
ಈ ಸಂದಭ೯ ರೋಟರಿ ಜಿಲ್ಲೆಯ ಕಾಯ೯ದಶಿ೯ ನಾರಾಯಣ ಹೆಗಡೆ, ನಿಯೋಜಿತ ಗವನ೯ರ್ ವಿಕ್ರಂ ದತ್ತ, ಮಾಜಿ ಗವನ೯ರ್ ಗಳಾದ ಡಾ.ರವಿ ಅಪ್ಪಾಜಿ, ಮಾತಂಡ ಸುರೇಶ್ ಚಂಗಪ್ಪ, ರೋಟರಿ ಜಿಲ್ಲಾ ಪ್ರಮುಖರಾದ ಸತೀಶ್ ಬೊಳಾರ್, ಜಾಥಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಆಯೋಜಕ ಸಂಸ್ಶೆಯಾದ ಬೈಕಂಪಾಡಿ ರೋಟರಿ ಸಂಸ್ಥೆಯ ಅಧ್ಯಕ್ಷ ಅಶೋಕ್, ಬಿ.ಜಿ. ಅನಂತಶಯನ, ಮೋಹನ್ ಪ್ರಭು, ಡಿ.ಎಂ.ತಿಲಕ್, ಬಿ.ಕೆ. ರವೀಂದ್ರರೈ, ಕೆ.ಕೆ.ವಿಶ್ವನಾಥ್, ಸೋಮಣ್ಣ, ಪಿ.ವಿ. ಅಶೋಕ್ , ಗೀತಾಗಿರೀಶ್, ಇನ್ನರ್ ವೀಲ್ ಕಾಯ೯ದಶಿ೯ ಲಲಿತಾರಾಘವನ್, ನಿದೇ೯ಶಕಿಯರಾದ ಮಲ್ಲಿಗೆಪೈ, ಪಾವ೯ತಿ ಚೀಯಣ್ಣ ಸೇರಿದಂತೆ ರೋಟರಿ ಸದಸ್ಯರು ಹಾಜರಿದ್ದರು.