ಮಡಿಕೇರಿ ಮಾ.2 : ((ಬರಹ : ಬೊಳ್ಳಜಿರ ಬಿ.ಅಯ್ಯಪ್ಪ)) ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ತರಬೇತಿ ಆಯುಕ್ತರಾದ ಹೆಚ್.ಮೈಥಿಲಿ ರಾವ್ ಅವರು ನಿಸ್ವಾರ್ಥ ಸೇವೆಯ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಹಲವು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
1973 ಜೂನ್ 12 ರಂದು ಜನಿಸಿದ ಹೆಚ್.ಮೈಥಿಲಿ ರಾವ್ ಅವರು ಹರೀಶ್ ರಾವ್.ಎಸ್ ಅವರನ್ನು ವಿವಾಹವಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ಒಬ್ಬರು ಕ್ಯಾಪ್ಟನ್ ಶರಣ್ಯ ರಾವ್ ಹೆಚ್. ಭಾರತೀಯ ಸೇನೆಯಲ್ಲಿದ್ದು, ಮತೋರ್ವರು ಹೆಚ್.ಪಲ್ಲವಿ ರಾವ್ ದುಬೈನ ಜಿ.ಆರ್.ಇ ತಾಜ್‍ಪಾಮ್ ಜುಮೇರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಹೇಶ್ ಚಂದ್ರ ಕೊಡ್ಕಣಿ ಹಾಗೂ ಮಮತಾ ಎಂ.ಕೊಡ್ಕಣಿ ಅವರ ಪುತ್ರಿ ಹೆಚ್.ಮೈಥಿಲಿ ರಾವ್ ದಾಂಡೇಲಿಯ ಸೇಂಟ್ ಮೈಕಲ್ ಸ್ಕೂಲ್ ನಲ್ಲಿ 1 ಮತ್ತು 2ನೇ ತರಗತಿ, 3ನೇ ತರಗತಿಯಿಂದ 10ನೇ ತರಗತಿಯವರೆಗೆ ದಾಮೋದರ್ ವಿದ್ಯಾಲಯ ಮಾರ್ಗೋವಾ ಗೋವಾದಲ್ಲಿ ಶಿಕ್ಷಣ ಪಡೆದರು.
1991ರಲ್ಲಿ ದಾಂಡೇಲಿ ಬಂಗೂರ್ ನಗರ್ ಪಿಯು ಕಾಲೇಜಿನಲ್ಲಿ ವಿಜ್ಞಾನ ಶಿಕ್ಷಣ ಮುಗಿಸಿ, 1994ರಲ್ಲಿ ದಾಂಡೇಲಿಯ ಬಂಗುರ ನಗರದಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಮುಗಿಸಿದರು. ನಂತರ 2011ರಲ್ಲಿ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂಕಾಂ ಸ್ನಾತಕೋತ್ತರ ಪದವಿ ಪಡೆದರು. ಹಿಂದಿ ಪ್ರವೀಣರಾದ ಇವರು ಬಿಎ ಹಿಂದಿ ಪ್ರಚಾರಕ ಸಮಿತಿ ಬೆಂಗಳೂರು, ಕರ್ನಾಟಕ ಸಂಗೀತ ಪರೀಕ್ಷೆ, ಜೂನಿಯರ್ ಗ್ರೇಡ್ ಪರೀಕ್ಷೆ -ಕರ್ನಾಟಕ ತಾಳವಾದ್ಯ ಅಭ್ಯಾಸ ಮಾಡಿದರು.
ಹೆಚ್.ಮೈಥಿಲಿ ರಾವ್ ಅವರು, ಚಾರ್ಟೆಡ್ ಅಕೌಂಟೆಂಟ್ ಆಫೀಸ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಿದ್ದು, ಸಂಗೀತ ಶಿಕ್ಷಕಿಯಾಗಿ ಸರ್ವೋದಯ ಡಿಎಡ್ ಕಾಲೇಜಿನ ಆಫೀಸ್ ಅಸಿಸ್ಟೆಂಟ್ ಆಗಿ, 2008 ರಲ್ಲಿ ವಿರಾಜಪೇಟೆಯ ಮಗ್ಗುಲ ನಿರ್ಮಲ ನರ್ಸಿಂಗ್ ಶಾಲೆ, 2010 ರಲ್ಲಿ ಜೂನಿಯರ್ ಗ್ರೇಡ್ ಪರೀಕ್ಷೆಯನ್ನು ಪೂರ್ಣಗೊಳಿಸಿ ಕುಕ್ಲೂರಿನಲ್ಲಿ ಸ್ವಂತ ಸಂಗೀತ ಅಕಾಡೆಮಿ ರಾಗ ತಾಳ ಲಯ ಸಂಗೀತ ಅಕಾಡೆಮಿಯನ್ನು ಪ್ರಾರಂಭಿಸಿದರು. 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಗೀತವನ್ನು ಕಲಿಸಿ ಜೂನಿಯರ್ ಗ್ರೇಡ್ ಪರೀಕ್ಷೆಗೆ ಹಾಜರಾಗುವಂತೆ ಮಾಡಿದ್ದಾರೆ.
2010ರಲ್ಲಿ ಅಕಾಮೆರಿ ಎಸ್‍ಎಂಎಸ್ ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಶನ್ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಸೇರ್ಪಡೆಯಾಗಿ, 2012 ರಲ್ಲಿ ಗಾಳಿಬೀಡು ನವೋದಯ ಶಾಲೆಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ನ ಮೂಲ ತರಬೇತಿ ಪಡೆದರು. 2014 ರಲ್ಲಿ ಸ್ಟೇಟ್ ಟ್ರೈನಿಂಗ್ ಸೆಂಟರ್ ಅಡ್ವಾನ್ಸ್ ಕೋರ್ಸ್, 2015 ರಲ್ಲಿ ದೊಡ್ಡಬಳ್ಳಾಪುರ ಆರ್.ಡಬ್ಲ್ಯೂ. ಬಿ ಕೋರ್ಸ್, 2016ರಲ್ಲಿ ಎ.ಎಲ್.ಟಿ ಕೋರ್ಸ್, 2019 ರಲ್ಲಿ ಎ.ಎಲ್.ಟಿ ಅಸಿಸ್ಟೆಂಟ್ ಲೀಡರ್ ಟ್ರೈನರ್ ಕೋರ್ಸ್ ಮಧ್ಯಪ್ರದೇಶ, 2.21ರಲ್ಲಿ ಎ.ಎಲ್.ಟಿ ಲೀಡರ್ ಟ್ರೈನರ್ ಕೋರ್ಸ್ ಎನ್‍ಟಿಸಿ ನ್ಯಾಷನಲ್ ಟ್ರೈನಿಂಗ್ ಸೆಂಟರ್ ಮಧ್ಯ ಪ್ರದೇಶ, 2020 ರಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕೋವಿಡ್ ವಾರಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಇವರ ಕಾರ್ಯವನ್ನು ಮೆಚ್ಚಿ ವಿಪತ್ತು ನಿರ್ವಹಣಾಕಾರ್ಯದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಂದ ಪ್ರಶಂಸನಾ ಪತ್ರ, ಪಿಎ.ಎಲ್.ಟಿ ಕೋರ್ಸ್ -2022 ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದರಿಂದ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಅವರಿಂದ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿದ್ದಾರೆ.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ನಲ್ಲಿ 15 ವರ್ಷಗಳ ಸುದೀರ್ಘ ಸೇವಾ ಪದಕ ಹಾಗೂ ಪ್ರಮಾಣ ಪತ್ರ, 2020ರಲ್ಲಿ ವಿರಾಜಪೇಟೆ ತಾಲ್ಲೂಕು ಭಾರತ್ ಸ್ಕೌಟ್ ಮತ್ತು ಗೈಡ್ ವತಿಯಿಂದ ಶಿಕ್ಷಕರ ದಿನಾಚರಣೆಯಂದು ಸನ್ಮಾನ, ಆರು ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪುರಸ್ಕಾರಗಳಿಸುವಲ್ಲಿ ತರಬೇತಿ, ಗ್ಲಾಸ್ ಹೌಸ್ ರಾಜ್ ಭವನದಲ್ಲಿ ರಾಜ್ಯಪಾಲರಿಂದ 56 ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ ಪ್ರಶಸ್ತಿ ದೊರೆತ್ತಿದ್ದು, ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಹೆಗ್ಗಳಿಕೆ ಮೈಥಿಲಿ ಅವರದ್ದು. 110 ವಿದ್ಯಾರ್ಥಿಗಳು ತೃತೀಯ ಸೋಪಾನ ಪ್ರಮಾಣ ಪತ್ರವನ್ನು ಕೊಡಗು ಜಿಲ್ಲಾಡಳಿತದಿಂದ ಪಡೆದಿದ್ದು, ಇದಕ್ಕೂ ಇವರೇ ಕಾರಣಕರ್ತರಾಗಿದ್ದಾರೆ.
ವಿರಾಜಪೇಟೆಯ ಬಸವೇಶ್ವರ ದೇವಸ್ಥಾನ ಬಸವನಗುಡಿ ಇವರು ಆಯೋಜಿಸಿದ್ದ “ವಾಯ್ಸ್ ಆಫ್ ವಿರಾಜಪೇಟೆ” ಇದರಲ್ಲಿ ಭಾಗವಹಿಸಿ ತೃತಿಯ ಬಹುಮಾನ ಗಳಿಸಿದ್ದಾರೆ. ವಿರಾಜಪೇಟೆ ತಾಲ್ಲೂಕು ಗಣೇಶ ಚತುರ್ಥಿ ಹಬ್ಬದ ರಸಮಂಜರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ “ಪ್ರಥಮ ಚಿಕಿತ್ಸೆ” ಕುರಿತಾದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗಮನ ಸೆಳೆದಿದ್ದಾರೆ. ಪಾಲಿಬೆಟ್ಟ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಎನ್‍ಎಸ್‍ಎಸ್ ಶಿಬಿರದಲ್ಲಿ “ಜೀವನ ಕೌಶಲ್ಯ” ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿ, ದೊಡ್ಡಬಳ್ಳಾಪುರದಲ್ಲಿ ನಡೆದ “ಬನ್ನಿ ಲೀಡರ್ ಕೋರ್ಸ್” ಇದರಲ್ಲಿ ಶಿಬಿರಾರ್ಥಿಯಾಗಿ ಪಾಲ್ಗೊಂಡು ತರಬೇತಿ ಪಡೆದಿದ್ದಾರೆ.
2022 ನವೆಂಬರ್ ತಿಂಗಳಿನಲ್ಲಿ 132 ಅಂಗನವಾಡಿ ಕಾರ್ಯಕರ್ತರಿಗೆ “ಬನ್ನಿ ಲೀಡರ್ ಕೋರ್ಸ್” ತರಬೇತಿ ನೀಡಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳೊಂದಿಗೆ ಕೊಡಗು ಜಿಲ್ಲಾಧಿಕಾರಿಯೊಂದಿಗಿನ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ-2022ರಲ್ಲಿ ಸೇವಾ ಸಿಬ್ಬಂದಿಯಾಗಿ ಕಾರ್ಯನಿರ್ವಹಣೆ, ಜಾಂಬೂರಿ ಮುಖ್ಯಸ್ಥ ಮೋಹನ್ ಆಳ್ವಾರಿಂದ ಸೇವಾ ಪದಕ ಮತ್ತು ಪ್ರಶಂಸನಾ ಪತ್ರವನ್ನು ಪಡೆದಿದ್ದಾರೆ. ಪ್ರಸ್ತುತ ಇವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಕೊಡಗು ಜಿಲ್ಲಾ ತರಬೇತಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.











