ಚೆಯ್ಯಂಡಾಣೆ ಮಾ.3 : ಕೊಡಗು ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ವತಿಯಿಂದ ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ಚೆಯ್ಯಂಡಾಣೆ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿ ನಾರಾಯಣ ರೆಡ್ಡಿ ಎರೆಹುಳು ಗೊಬ್ಬರ ಉತ್ಪಾದನೆ ಮತ್ತು ಬಳಕೆ, ಸಾವಯವ ಗೊಬ್ಬರ ಮತ್ತು ಅವುಗಳ ಮಹತ್ವ, ಹಸಿರಲೆ ಗೊಬ್ಬರಗಳ ಬಳಕೆ, ಕೊಡಗು ಜಿಲ್ಲೆಗೆ ಸೂಕ್ತವಾದ ಭತ್ತದ ತಳಿಗಳು ಮತ್ತು ಭತ್ತದ ಬೀಜೋಪಚಾರಗಳು, ಅಜೋಲದಿಂದ ಸಾವಯವ ಕೃಷಿಕರಿಗೆ ವರದಾನ, ಪೌಷ್ಟಿಕ ಬೆಳೆ ವಿಮೆ ಸಂರಕ್ಷಣೆ, ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಶಿಷ್ಯವೇತನ ಪಡೆಯುವ ಬಗ್ಗೆ ಹಾಗೂ ಇನ್ನಿತರ ಹಲವು ಮಾಹಿತಿಗಳನ್ನು ನೀಡಿದರು.
ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷೆ ಬಿ.ಎಸ್.ಪುಷ್ಪ, ಸದಸ್ಯರಾದ ಮುಂಡಿಯೋಳಂಡ ಈರಪ್ಪ, ಪೆಮ್ಮಂಡ ಕಾವೇರಮ್ಮ, ಸಂಜೀವಿನಿ ಒಕ್ಕೂಟದ ಬಿ.ಕೆ.ವಸಂತಿ, ಕೃಷಿ ಸಖಿ, ಪಶು ಸಖಿ, ಗ್ರಾಮಸ್ಥರು ಹಾಜರಿದ್ದರು.
ವರದಿ : ಅಶ್ರಫ್