ಸುಂಟಿಕೊಪ್ಪ ಮಾ.4 : ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸರಸ್ವತಿ ಪೂಜೆ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರವನ್ನು ವಿತರಿಸಲಾಯಿತು.
ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಸರಸ್ವತಿ ದೇವಿಗೆ ಪೂಜೆಯನ್ನು ಶ್ರೀ ಚಾಮುಂಡೇಶ್ವರಿ ದೇವಾಲಯದ ಆರ್ಚಕರಾದ ಮಂಜುನಾಥ ಉಡುಪ ನೇರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪಿ.ಎಸ್.ಜಾನ್ ಮಾತನಾಡಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ವಿದ್ಯಾದೇವತೆ ಸರಸ್ವತಿ ಪೂಜಾ ಕಾರ್ಯವನ್ನು ಹಮ್ಮಿಕೊಂಡಿದೆ. ಕಾಲೇಜಿನ ಆವರಣದಲ್ಲಿ ಭಕ್ತಿಪೂರ್ವಕ ಸಾತ್ವಿಕ ವಾತಾವರಣವನ್ನು ಸೃಷ್ಠಿಮಾಡಿದೆ ಎಂದರು.
ತಾಯಿ ಸರಸ್ವತಿಯು ವಿದ್ಯಾರ್ಥಿಗಳ ಮುಂದಿನ ವ್ಯಾಸಂಗ ಜೀವನಕ್ಕೆ ಆರ್ಶಿವಾದಿಸಲಿ ಎಂದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶನ ನೀಡಿದರು.
ಆರ್ಶಿವಚನ ನೀಡಿದ ಶ್ರೀ ಚಾಮುಂಡೇಶ್ವರಿ ದೇವಾಲಯದ ಆರ್ಚಕರಾದ ಮಂಜುನಾಥ ಉಡುಪ ಅವರು ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ಮಾರ್ಗದರ್ಶನ ನೀಡಿದರು.
ಸಂತ ಅಂತೋಣಿ ದೇವಾಲಯದ ಉಪಯಾಜಕರಾದ ಚಾಲ್ರ್ಸ್ ಅವರು ಮಾತನಾಡಿ ಏಕಾಗ್ರತೆ ಸಮಚಿತ್ತದಿಂದ ಅಧ್ಯಯನ ಕಡೆ ತಮ್ಮನ್ನು ತೊಡಗಿಸಿಕೊಳ್ಳುವುದ್ದರಿಂದ ಉತ್ತಮ ಫಲಿತಾಂಶದ ಸಾಧನೆಯನ್ನು ಮಾಡಿದಾಗ ತಾವು ಕಲಿತ ವಿದ್ಯಾ ಕೇಂದ್ರ ಹಾಗೂ ಪೋಷಕರಿಗೆ ಕೀರ್ತಿ ಪಾತಕೆಯನ್ನು ಹಾರಿಸಬಹುದಾಗಿದೆ.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಎಂ.ಕರುಂಬಯ್ಯ, ಖಜಾಂಜಿ ರಮೇಶ್ ಪಿಳ್ಳೆ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ವಹೀದ್‍ಜಾನ್, ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ್, ಕಾಲೇಜಿನ ಉಪನ್ಯಾಸಕರು ಇದ್ದರು.






