ಮಡಿಕೇರಿ ಮಾ.6 : ಗಾಳಿಬೀಡು ಯುವಕರ ಸಂಘದ ವತಿಯಿಂದ ಪ್ರೌಢ ಶಾಲೆಯ ಆಟದ ಮೈದಾನದಲ್ಲಿ ನಡೆದ ಗಾಳಿಬೀಡು ಚಾಂಪಿಯನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಹೆಬ್ಬೆಟ್ಟಗೇರಿಯ ಕೆ.ಪಿ.ರಾಕರ್ಸ್ ಚಾಂಪಿಯನ್‍ಪಟ್ಟ ಪಡೆಯಿತು.
ಗಾಳಿಬೀಡಿನ ಕೆ.ಕೆ ಫ್ರೆಂಡ್ಸ್ ಕೆ.ಪಿ ರಾಕರ್ಸ್ ಎದುರು ಪರಾಭವಗೊಂಡು ರನ್ನರ್ಸ್ ಸ್ಥಾನ ಪಡೆದುಕೊಂಡರೆ, ಹೆಚ್.ಡಿ ಈಗಲ್ಸ್ ತಂಡ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ವೈಯಕ್ತಿಕ ಬಹುಮಾನಗಳು : ಬೆಸ್ಟ್ ಬ್ಯಾಟ್ಸ್ ಮನ್ ರಂಜು ಕೊಂಬಾರನ, ಬೆಸ್ಟ್ ಬೌಲರ್ ಪಿ.ಸಿ.ರಮೇಶ್, ಮ್ಯಾನ್ ಆಫ್ ದಿ ಸೀರಿಸ್ : ರಂಜು ಕೊಂಬಾರನ, ಎನರ್ಜೆಟಿಕ್ ಪ್ಲೇಯರ್ ಧನಿಕ್, ಬೆಸ್ಟ್ ಪರ್ಫಾರ್ಮರ್ ಗಣೇಶ್ ಪೂಜಾರಿ ವೈಯಕ್ತಿಕ ಬಹುಮಾನಗಳನ್ನು ಪಡೆದುಕೊಂಡರು.
ಆಕರ್ಷಕ ಬಹುಮಾನವಾಗಿ ಕಾಶಿ ಸಹೋದರರು ನೀಡಿದ ಸೈಕಲ್ ನೆರೆದವರು ಗಮನಸೆಳೆಯಿತು.
ಸಮಾರೋಪ : ಗಾಳಿಬೀಡು ಚಾಂಪಿಯನ್ಸ್ ಕ್ರಿಕೆಟ್ ಲೀಗ್ ಫೈನಲ್ ಪಂದ್ಯಾವಳಿಗೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಳುಮುಡಿಯನ ಅನಂತ್ ಕುಮಾರ್ ಫೈನಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು.
ನಂತರ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಳಿಬೀಡು ಗ್ರಾಮದಲ್ಲಿ ಯುವಕರು ಹೀಗೊಂದು ಕ್ರೀಡಾಕೂಟ ಆಯೋಜಿಸಿರುವುದು ಸಂತಸದ ವಿಚಾರ ಎಂದರು.
ನಿವೃತ್ತ ಡಿ.ವೈ.ಎಸ್.ಪಿ ಯಾಲದಾಳು ಕೇಶವಾನಂದ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.
ಉದ್ಯಮಿ ಪುಷ್ಪ ಪೂಣಚ್ಚ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರನಿಗೆ ನಗದು ಬಹುಮಾನ ನೀಡಿದರು ಹಾಗೂ ಯುವಕರ ಪ್ರಯತ್ನಕ್ಕೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ಪ್ರಮುಖರಾದ ತೆಕ್ಕಡ ಕಾಶಿ ಕಾವೇರಪ್ಪ, ಕ್ರೀಡೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದ ಜನಾರ್ಧನ, ಗಣಪತಿ ಉತ್ಸವ ಸಮಿತಿಯ ಅಧ್ಯಕ್ಷ ರವಿ, ಪತ್ರಕರ್ತ ಚಂದನ್ ನಂದರಬೆಟ್ಟು, ಪಂಚಾಯತ್ ಸದಸ್ಯ ಗಿರಿ ಮತ್ತಿತರರು ಹಾಜರಿದ್ದರು.









