ಮಡಿಕೇರಿ ಮಾ.7 : ಬೈಕ್ ಅಪಘಾತದಲ್ಲಿ ಸೋಮವಾರಪೇಟೆಯ ಬೀಟೆಕಟ್ಟೆ ಗ್ರಾಮದ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸುರತ್ಕಲ್ ಟೋಲ್ ಗೇಟ್ ಬಳಿ ನಡೆದಿದೆ.
ಬಜ್ಪೆ ಕೆಂಜಾರು ಶ್ರೀದೇವಿ ಕಾಲೇಜು ವಿದ್ಯಾರ್ಥಿ ಮೂಲತ: ಸೋಮವಾರಪೇಟೆಯ ಬೀಟೆಕಟ್ಟೆ ಗ್ರಾಮದ ನಿವಾಸಿ ಶಶಾಂಕ್ (21) ಮೃತ ದುರ್ದೈವಿ. ಸೋಮವಾರ ರಾತ್ರಿ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಸುರತ್ಕಲ್ ಕಡೆಯಿಂದ ಮುಲ್ಕಿ ಕಡೆ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಹಿoಬದಿ ಸವಾರರಾಗಿದ್ದ ಶಶಾಂಕ್ ಅಪಘಾತದ ಸಂದರ್ಭ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸ್ನೇಹಿತ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಹಾಗೂ ಸಿಬ್ಬಂದಿ ಭೇಟಿ ನಿಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಸಿಕೊಂಡಿದ್ದಾರೆ.













