ಮಡಿಕೇರಿ ಮಾ.7 : ಮಡಿಕೇರಿ 66/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್ 3 ಗದ್ದಿಗೆ ಮತ್ತು ಎಫ್2 ಓಂಕಾರೇಶ್ವರ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವುದರಿಂದ ಮಾ. 9 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಗೌಡ ಸಮಾಜ, ಕನ್ನಂಡಬಾಣೆ, ಓಂಕಾರೇಶ್ವರ ದೇವಸ್ಥಾನ ರಸ್ತೆ, ವೈವಾಸ್, ಗಣಪತಿಬೀದಿ, ಜೂನಿಯರ್ ಕಾಲೇಜು, ಸಂಪಿಗೆಕಟ್ಟೆ, ಅಜಾದ್‍ನಗರ, ಮಾರ್ಕೆಟ್, ಎ.ವಿ.ಶಾಲೆ, ಭಗವತಿನಗರ, ಕಾನ್ವೆಂಟ್ ಜಂಕ್ಷನ್, ಗಾಳಿಬೀಡು, ಕಾಲೂರು, ಹೆಬ್ಬೆಟ್ಟಗೇರಿ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹಾಗೆಯೇ 33/11 ಕೆವಿ ಮೂರ್ನಾಡು, ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ನಾಪೋಕ್ಲು ಮತ್ತು ಹೊದ್ದೂರು ಫೀಡರ್‍ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವುದರಿಂದ ಮಾರ್ಚ್, 09 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ನಾಪೋಕ್ಲು, ಹೊದ್ದೂರು, ಕೊಟ್ಟಮುಡಿ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ತಿಳಿಸಿದ್ದಾರೆ.









