ವಿರಾಜಪೇಟೆ ಮಾ.9 : ವಿರಾಜಪೆಟೆಯ ಪುರಸಭೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವಿರಾಜಪೇಟೆ ಪುರಸಭೆ ವ್ಯಾಪ್ತಿಯ ರಸ್ತೆಯಲ್ಲಿ ವಾಹನ ನಿಲುಗಡೆ ಶುಲ್ಕ ವಿಧಿಸುವ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ಗದ್ದಲ ಉಂಟಾಗಿ ಪರಸ್ಪರ ದಿಕ್ಕಾರ ಕೂಗಿ, ಸಭೆ ಮೊಟಕುಗೊಳಿಸುವ ಘಟನೆ ನಡೆಯಿತು.
ಪುರಸಭೆ ಅಧ್ಯಕ್ಷೆ ಸುಸ್ಮೀತಾ ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ಕಳೆದ ಬಾರಿ ನಾವು ವಾಹನ ನಿಲುಗಡೆ ಶುಲ್ಕವನ್ನು ರದ್ದುಪಡಿಸಿದ್ದೇವೆ. ಆದರೆ ಈ ಬಾರಿ ಅದನ್ನು ಅಳವಡಿಸಿ ಬದ್ರೀಯಾ ಜಂಕ್ಷನ್‍ನಿಂದ ಗೋಣಿಕೊಪ್ಪ ಸಂಪರ್ಕ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ರಸ್ತೆ, ಗಾಂಧಿನಗರ ರಸ್ತೆಗೆ ವಾಹನ ಶುಲ್ಕ ನಿಗದಿಗೆ ಆಕ್ಷೇಪ ವ್ಯಕ್ತಪಡಿಸಿ ಇದು ಜನರಿಗೆ ಹೊರೆಯಾಗಲಿದ್ದು ಇದನ್ನು ಕೈ ಬಿಡುವಂತೆ ಒತ್ತಾಯಿಸಿದರು.
ಬಿಜೆಪಿಯ ನಾಮಕರಣ ಸದಸ್ಯ ಕೂತಂಡ ಸಚಿನ್ ಕುಟ್ಟಯ್ಯ ಪಟ್ಟಣದಲ್ಲಿ ವಾಹನ ನಿಲುಗಡೆ ಸಮಸ್ಯೆ ತೀವ್ರವಾಗಿದೆ. ಅಂಗಡಿ ಮಾಲಿಕರ ವಾಹನವನ್ನು ಬೆಳಗ್ಗಿನಿಂದ ಸಂಜೆವರೆಗೆ ನಿಲ್ಲಿಸುತ್ತಾರೆ. ಕೆಲವರು ಬೆಳಿಗ್ಗೆ ವಾಹನ ನಿಲ್ಲಿಸಿ ದೂರದೂರಿಗೆ ಕೆಲಸಗಳಿಗೆಂದು ತೆರಳಿ ರಾತ್ರಿ ವಾಹನ ತೆಗೆಯುತ್ತಾರೆ. ಇದನ್ನು ತಪ್ಪಿಸಲು ಈ ರೀತಿ ಶುಲ್ಕ ಅಗತ್ಯ ಎಂದು ಪ್ರತಿಕ್ರಿಯಿಸಿದರು.
ಪ್ರತಿಪಕ್ಷದ ಸದಸ್ಯ ರಾಜೇಶ್ ಕಿತ್ತೂರುರಾಣಿ ಚೆನ್ನಮ್ಮ ರಸ್ತೆಯಲ್ಲಿ ನ್ಯಾಯಾಲಯ, ಆಸ್ವತ್ರೆ ಪುರಸಭೆ ಕಚೇರಿ, ತಾಲೂಕು ಕಚೇರಿ ಹೀಗೆ ಅನೇಕ ಕಚೇರಿಗಳಿವೆ. ನಿತ್ಯ ಕೆಲಸಗಳಿಗೆ ಬಂದು ಹೋಗುವ ಜನರಿಗೆ ವೃಥಾ ತೊಂದರೆಯಾಗಲಿದೆ. ಹತ್ತು ರೂ ಎಂದರು ನಾಳೆ ಅದು ದಂಧೆಯಂತೆ ಆಗಿ ಶುಲ್ಕ ಹೆಚ್ಚಾಗುತ್ತಾ ಹೋಗುತ್ತದೆ. ಕೋವಿಡ್ ಸೇರಿದಂತೆ ಬೆಲೆ ಏರಿಕೆ ಮುಂತಾದ ಕಾರಣಗಳಿಂದ ಜನರು ಆರ್ಥಿಕ ಸಂಕಷ್ಟದಲ್ಲಿದ್ದು ಅವರಿಗೆ ಮತ್ತೆ ತೊಂದರೆ ನೀಡುವುದು ಸರಿಯಲ್ಲ ಎಂದರು.
ಪ್ರತಿಪಕ್ಷದ ಸದಸ್ಯ ಪ್ರಥ್ವಿನಾಥ್ ಮಾತನಾಡಿ, ಶಾಸಕರ ಕಚೇರಿಗೆ ಹೋಗುವವರು ವಾಹನ ಶುಲ್ಕ ನೀಡಿಹೋಗುವದು ನ್ಯಾಯವೇ ಎಂದು ಪ್ರಶ್ನಿಸಿದರು.
ನೆಲಮಾಳಿಗೆ ಪಾರ್ಕಿಂಗ್ ಇಲ್ಲದೆ ಮಳಿಗೆ ಆಗಿದೆ. ತಾಲೂಕು ಕಚೇರಿಯಲ್ಲಿ ಸಹ ವಾಹನ ನಿಲುಹಡೆಗೆ ವ್ಯವಸ್ಥೆ ಇಲ್ಲ, ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದರು. ಈ ವಿಚಾರವಾಗಿ ಸದಸ್ಯರಾದ ಮತ್ತೀನ್, ದೇಚಮ್ಮ ಸಹ ಮಾತನಾಡಿ ವಾಹನ ಪಾರ್ಕಿಂಗ್‍ಗೆ ಶುಲ್ಕ ನಿಗದಿ ಸರಿಯಲ್ಲ ಎಂದರು.
ರಾಜೇಶ್ ಪದ್ಮನಾಭ ಮತ್ತೀತರ ಸದಸ್ಯರು ಈ ವಿಚಾರವನ್ನು ಬಹುಮತಕ್ಕೆ ಹಾಕಿ ಆ ಮೂಲಕ ಶುಲ್ಕ ಎತ್ತಾವಳಿ ಬೇಕೆ ಬೇಡವೇ ಎಂದು ನಿರ್ಧಾರಿತವಾಗಲಿ ಎಂದು ಪಟ್ಟು ಹಿಡಿದರು.
ಮುಖ್ಯಧಿಕಾರಿ ಚಂದ್ರಕುಮಾರ್ ಇದು ಸಾಧ್ದ ಇಲ್ಲ ಎಂದಾಗ ರಾಜೇಶ್ ಇದೇನು ನಿಮ್ಮ ಚಕ್ರಾಧಿಪತ್ಯವೇ ಎಂದು ಖಾರವಾಗಿ ಪ್ರಶ್ನಿಸಿದರು.
ಸದಸ್ಯ ಪ್ರಥ್ವಿನಾಥ್ ಪ್ರತಿಕ್ರಿಯಿಸಿ ಇಲ್ಲಿ ಪುರಸಭೆಯ ನಿಯಮ ಪಾಲನೆ ಇಲ್ಲ, ಇದು ಸಂವಿಧಾನಕ್ಕೆ ಬೆಲೆ ಇಲ್ಲ, ಪ್ರಜಾಪ್ರಭುತ್ವದ ಕಗ್ಗೋಲೆ ಎಂದು ಕೂಗಾಡಿದರು. ಈ ಸಂಸರ್ಭ ಸದಸ್ಯ ಮತ್ತೀನ್ ಸಂಯಮ ಮೀರಿ ಮಾತನಾಡಿ ನಿಯಮ ಗೊತ್ತಿಲ್ಲವಾದರೆ ಎದ್ದು ಹೋಗಿ ಎಂದು ಮುಖ್ಯಧಿಕಾರಿಗೆ ಹೇಳಿದಾಗ ಚಂದ್ರಕುಮರ್ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಆಡಳಿತ ಪಕ್ಷದ ಸದಸ್ಯರಾದ ಸುನೀತಾ ಜೂನಾ, ಅನಿತಾ ಕುಮಾರ್, ಮಹಾದೇವ ಮತ್ತಿತರರು ವಾಹನ ಶುಲ್ಕ ವಿಧಿಸಿಯೇ ತೀರಬೇಕೆಂದರು. ಪ್ರತಿಪಕ್ಷದರು ಏರಿದ ಧ್ವನಿಯಲ್ಲಿ ಕೂಗಾಡಿದರು. ಈ ವಿಚಾರವನ್ನು ಮತಕ್ಕೆ ಹಾಕುವುದಿಲ್ಲ ಮತ್ತು ಇದರಲ್ಲಿ ಯಾವ ಬದಲಾವಣೆ ಇಲ್ಲ ಎಂದು ಅಧ್ಯಕ್ಷೆ ಶುಸ್ಮೀತಾ ಸಭೆಗೆ ತಿಳಿಸಿದಾಗ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸಭಾಂಗಣದ ಅಧ್ಯಕ್ಷ ಪೀಠದ ಮುಂದೆ ಧರಣಿ ನಡೆಸಿ ಆಡಳಿತ ಪಕ್ಷದ ವಿರುದ್ದ ದಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಸಭಾಂಗಣದ ಮುಂದೆ ಬಿಜೆಪಿ ಸದಸ್ಯರು ಪ್ರತಿಪಕ್ಷದ ಸದಸ್ಯರ ವಿರುದ್ದ ಎದುರಾಗಿ ನಿಂತು ದಿಕ್ಕಾರ ಕೂಗಿದರು. ಇದರ ಬಳಿಕ ಮತ್ತೆ ಸಭೆಯಲ್ಲಿ ಶುಲ್ಕ ರದ್ದತಿಗೆ ಪ್ರತಿಪಕ್ಷ ಪಟ್ಟು ಮುಂದುವರಿಸಿದರು.
ಸದಸ್ಯ ಪಟ್ಟಡ ರಂಜಿ ಪೂಣಚ್ಚ ಸಹ ಆಡಳಿತರೂಢ ಪಕ್ಷದ ನಡೆಯನ್ನು ಖಂಡಿಸಿ ಮಾತನಾಡಿದರು. ಒಂದು ಹಂತದಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುವುದೇ ಯಾರಿಗೂ ತಿಳಿಯದಂತ ಪ್ರಕ್ಷುಬ್ದ ವಾತಾವರಣ ಉಂಟಾಗಿ ಗೊಂದಲಮಯವಾಗಿತ್ತು.
ಸಭೆಯಲ್ಲಿ ಯಾವ ತೀರ್ಮಾನಗಳು, ಕಾರ್ಯಸೂಚಿಗಳ ಪ್ರಕಾರ ಚರ್ಚೆ ಮಾಡಲು ಅವಕಾಶವಾಗಲಿಲ್ಲ. ಸಭೆಯಲ್ಲಿ ಕೇವಲ ಆರೋಪ ಪ್ರತ್ಯಾರೋಪಗಳೇ ಎದುರಾಗಿ ಅಭಿವೃದ್ದಿ ಕಾರ್ಯದ ಪರ ಯಾವ ಚರ್ಚೆಯೂ ನಡೆಯದೆ ಕೊನೆಯಲ್ಲಿ ಅಧ್ಯಕ್ಷೆ ಸುಸ್ಮೀತಾ ಸಭೆಯನ್ನು ಮುಕ್ತಾಯಗೊಳಿಸುವುದಾಗಿ ಘೋಷಿಸಿದರು.
ಯಾವ ಚರ್ಚೆ ಇಲ್ಲದೆ ಸಭೆ ಮುಗಿಸಿದ್ದರಿಂದ ಶುಲ್ಕ ವಿಧಿಸಲು ಟೆಂಡರ್ ಕರೆಯುವ ನಿರ್ಧಾರ ಮಾಡಿತು.
ಸಭೆಯಲ್ಲಿ ಪುರಸಭೆ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋಧ, ಅಭಿಯಂತರ ಹೇಮಾ ಕುಮಾರ್, ಆರೋಗ್ಯಧಿಕಾರಿ ಹಾಗೂ ಪುರಸಭೆಯ ಸದಸ್ಯರು ಹಾಜರಿದ್ದರು.
Breaking News
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*
- *ಹೆಗ್ಗಳ ಗ್ರಾಮದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ*
- *ಎನ್.ಯು.ನಾಚಪ್ಪ ವಿರುದ್ಧ ಪ್ರಕರಣ : ಮಡಿಕೇರಿ ಕೊಡವ ಸಮಾಜ ಖಂಡನೆ*
- *ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೆ ಪಿ.ಹೆಚ್.ಡಿ ಪದವಿ*