ಸುಂಟಿಕೊಪ್ಪ,ಮಾ.10: ಗ್ರಾಮ ದೇವರ 4ನೇ ವರ್ಷದ ವಾರ್ಷಿಕ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ಸುಂಟಿಕೊಪ್ಪದ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ, ರಾಮ ಸೇವಾ ಸಮಿತಿ, ಅಯ್ಯಪ್ಪ ದೇವಾಲಯ, ಗೌರಿ ಗಣೇಶೋತ್ಸವ, ಮಸಣಕಮ್ಮ ದೇವಸ್ಥಾನ, ವೃಕ್ಷೋದ್ಭವ ಗಣಪತಿ ದೇವಾಲಯ, ಟಿಸಿಎಲ್ ಚಾಮುಂಡೇಶ್ವರಿ ದೇವಸ್ಥಾನ, ಶ್ರೀದೇವಿ ಅಣ್ಣಪ್ಪ ದೇವಾಲಯ, ಬಾಳೆಕಾಡು ಮುತ್ತಪ್ಪ ದೇವಸ್ಥಾನ ಸಮಿತಿಗಳ ಸಹಭಾಗಿತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಗ್ರಾಮ ದೇವರ ವಾರ್ಷಿಕ ಪೂಜೋತ್ಸವದ ಅಂಗವಾಗಿ ತಳಿರು ತೋರಣ ವಿವಿಧ ಬಗೆಯ ಬಣ್ಣ ಹೂಗಳಿಂದ ಸಿಂಗರಿಸಲಾಗಿತ್ತು.
ಅರ್ಚಕ ಗಣೇಶ್ ಭಟ್ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಸ್ಥಳ ಶುದ್ಧಿ ಕಳಸದೊಂದಿಗೆ ಕುಂಕುಮ ಪೂಜೆ, ಅಲಂಕಾರ ಪೂಜೆ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಬೆಳಿಗ್ಗೆ 10.30 ಗಂಟೆಯ ನಂತರ ಗ್ರಾಮ ದೇವರಿಗೆ ಹರಕೆ ಸಮರ್ಪಣೆ ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಭಕ್ತರು ಗ್ರಾಮ ದೇವತೆಗೆ ಹರಕೆ ಒಪ್ಪಿಸಿದರು.
ಸಮಿತಿಯ ದಿನು ದೇವಯ್ಯ, ಎ.ಶ್ರೀಧರ್ ಕುಮಾರ್, ಸುರೇಶ್ ಗೋಪಿ, ಪಟ್ಟೆ ಮನೆ ಉದಯಕುಮಾರ್, ಪಟ್ಟೆಮನೆ ಲೋಕೇಶ್, ಪಟ್ಟೆಮನೆ ಅನಿಲ್ ಕುಮಾರ್, ಬಿ.ಕೆ.ಪ್ರಶಾಂತ್, ಶ್ರೀಧರನ್, ಶಿವಕುಮಾರ್, ಎ.ಲೋಕೇಶ್ ಕುಮಾರ್, ಬಿ.ಬಿ.ಭಾರತೀಶ್, ಮನು ರೈ, ಶಾಂತರಾಮ್ ಕಾಮತ್ ಇತರರು ಇದ್ದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*