ಕಡಂಗ ಮಾ.13 : ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಮತ್ತು ಓಯಸಿಸ್ ಸ್ಪೋರ್ಟ್ಸ್ ಕ್ಲಬ್ ಹೋದವಾಡ ಆಶ್ರಯದಲ್ಲಿ ನಡೆದ 19ನೇ ವರ್ಷದ ಕೊಡಗು ಮುಸ್ಲಿಂ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿರಾಜಪೇಟೆ ಬ್ಲಾಕ್ ಕೋಬ್ರಾ ತಂಡ ಚಾಂಪಿಯನ್ ಪಟ್ಟ ಪಡೆದುಕೊಂಡಿತು.
ಚರಿಯಪರಂಬು ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ 19ನೇ ವರ್ಷದ ಕೊಡಗು ಮುಸ್ಲಿ0 ಕಪ್ ಕ್ರೀಡಾಕೋಟದ ಕ್ವಾಟರ್ ಫೈನಲ್ನ ಮೊದಲ ಪಂದ್ಯದಲ್ಲಿ ಬ್ಯಾರಿ ಮಡಿಕೇರಿ ತಂಡವನ್ನು
ಆಶಿಶ್ ಗೋಣಿಕೊಪ್ಪ ಮಣಿಸಿ ಸೆಮಿಫೈನಲ್ ಪ್ರವೇಸಿದರು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ನಲ್ಲಿ ಆಶಿಶ್ ತಂಡ 5 ಓವರ್ ನಲ್ಲಿ 54 ರನ್ ಗಳಿಸಿದರು.
ಈ ಮೊತ್ತ ವನ್ನು ಬೆನ್ನೆಟಿದ ಬ್ಲಾಕ್ ಕೋಬ್ರಾ ತಂಡ 4 ಓವರಗಳಲ್ಲಿ ಪಂದ್ಯ ವಿಜಯ ಶಾಲಿ ಯಾಗಿ ಫೈನಲ್ ಪ್ರವೇಶಿಸಿದರು.
2ನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಕೆ ವೈ ಸಿ ಸಿ ಕಡಂಗ ತಂಡ 5 ಓವರ್ ನಲ್ಲಿ 2 ವಿಕೆಟ್ 93ರನ್ ಕಲೆ ಹಾಕಿದರು ಈ ಮೊತ್ತ ಬೆನ್ನಟ್ಟಿದ ಫ್ರೀಡಂ ಬಾಯ್ಸ್ ಹುಂಡಿ ತಂಡವು 62 ರನ್ ಗಳಿಸಿ 31 ರನ್ ಗಳ ಅಂತರದಲ್ಲಿ ಕಡಂಗ ತಂಡ ಫೈನಲ್ ಪ್ರವೇಶಿಸಿಲಾಯಿತು.
ತೃತೀಯ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಫ್ರೀಡಂ ಬಾಯ್ಸ್ ಹುಂಡಿ ತಂಡವು ಆಶಿಶ್ ಗೋಣಿಕೊಪ್ಪ ತಂಡವನ್ನು ಮಣಿಸಿದರು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ನೆಡೆಸಿದ ಕೆ ವೈ ಸಿ ಸಿ ತಂಡ 5 ಓವರ್ ನಲ್ಲಿ 43 ರನ್ ಕಲೆ ಹಾಕಿದರು.
ಈ ಮೊತ್ತ ವನ್ನು ಬೆನ್ನಟ್ಟಿದ ಬ್ಲಾಕ್ ಕೋಬ್ರಾ ತಂಡ 4 ಓವರ್ 5ನೆ ಎಸೆತದಲ್ಲಿ ಅಮೋಘ ವಿಜಯಾಶಾಲಿಯದರು.
ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಬ್ಲಾಕ್ ಕೋಬ್ರಾ ತಂಡದ ನಾಸಿರ್ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೆ ವೈ ಸಿ ಸಿ ತಂಡದ ಆಸ್ಕರ್ ಪಡೆದುಕೊಂಡರು.
ಸಮಾರೋಪ :: ಒಯಸಿಸ್ ಸಂಘದ ಶಾಫಿ ಅಧ್ಯಕ್ಷ ತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಮಾತನಾಡಿ, ಕ್ರೀಡೆಯಿಂದ ಸೌಹಾರ್ದತೆ ಹೆಚ್ಚಾಗಲಿದ್ದು, ಜಿಲ್ಲೆಯಲ್ಲಿ ಒಳ್ಳೆಯ ಕ್ರೀಡಾಂಗಣಗಳು ಹೆಚ್ಚಾಗಲಿ ಎಂದು ಆಶಿಸಿದರು.
ಸಮಾಜ ಸೇವಕ ಮಂತರ್ ಗೌಡ ಮಾತನಾಡಿ, ಸರ್ಕಾರದಿಂದ ಕ್ರೀಡಾಕೋಟಕ್ಕೆ ಅನುದಾನ ಸಿಗಬೇಕಾಗಿದೆ ಎಂದರು.
ಮುಸ್ಲಿಂ ಕಪ್ ಸ್ಥಾಪಕ ರಶೀದ್ ಎಡಪಾಲ ಮಾತನಾಡಿ, ಯುವ ಪ್ರತಿಭೆಗಳನ್ನು ಹೊರ ತರಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ನುಡಿದರು.
ಕಾರ್ಯಕ್ರದಲ್ಲಿ ಸಂಘದ ವತಿಯಿಂದ 4 ಅಂಗವಿಕಲರಿಗೆ ವೀಲ್ ಚೇರ್ ನೀಡಲಾಯಿತು ಮತ್ತು
ರಕ್ತ ದಾನಿಗಳನ್ನು ಸನ್ಮಾನಿಸಲಾಯಿತು.
ಕೊಡಗು ಮುಸ್ಲಿಂ ಕಪ್ ಸ್ಥಾಪಕ ರಶೀದ್ ಕುಪ್ಪೋಡ೦ಡ, ಕೊಡಗು ಮುಸ್ಲಿಂ ಸ್ಪೋರ್ಟ್ ಟ್ರಸ್ಟ್ ನ ಅಧ್ಯಕ್ಷ ಅಬ್ದುಲ್ ಖಾದರ್,ಜಿಲ್ಲಾ ಕಾಂಗ್ರೆಸ್ ಅಧ್ಯಕ ಧರ್ಮಜ ಉತ್ತಪ್ಪ , ಅಮೀನ್ ಮೊಹಸಿನ್, ಹ್ಯಾರಿಸ್ , ಮನ್ಸೂರ್ ಅಲಿ,
ಯಾಕೂಬ್, ಹಂಸು ಕೊಟ್ಟಮುಡಿ, ನಾಸರ್ ಸಿ.ಎ.ವಿರಾಜಪೇಟೆ, ಅದo, ಮುಜೀಬ್ ಮೂರ್ನಾಡ್, ಸಿಯಬ್ , ಸುಹೈಲ್, ಅಚ್ಚಪ್ಪು, ರಜಾಕ್, ಹ್ಯಾರಿಸ್, ಸುಫ್ಯಯಾನ್ ವಕೀಲರು ,ರಾಜಿಕ್ ವಿರಾಜಪೇಟೆ, ಶಮೀರ್ ಕಡಂಗ,ಲಾರ ಹ್ಯಾರಿಸ್, ಹ್ಯಾರಿಸ್ ಮುಂತಾದ ಗಣ್ಯವ್ಯಕ್ತಿ ಗಳು ಭಾಗವಹಿಸಿದರು.
ವರದಿ : ನೌಫಲ್ ಕಡಂಗ