ಮಡಿಕೇರಿ ಮಾ.13 : 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ತಯಾರಿಕೆ, ಸಾಗಾಣಿಕೆ, ದಾಸ್ತಾನು ಮತ್ತು ಮಾರಾಟ ಹಾಗೂ ಇತರ ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಲು ಸಹಾಯವಾಣಿ ಕೇಂದ್ರ (ಕಂಟ್ರೋಲ್ ರೂಂ) ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಕಂಟ್ರೋಲ್ ರೂಂನ ಟೋಲ್ ಪ್ರೀ ದೂರವಾಣಿ ಸಂಖ್ಯೆಗೆ ಅಥವಾ ಅಬಕಾರಿ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲು ಕೋರಿದೆ.
ಜಿಲ್ಲಾ ನಿಯಂತ್ರಣ ಕೊಠಡಿ(ಕಂಟೋಲ್ ರೂಂ) ಟೋಲ್ ಪ್ರೀ ಸಂ.08272-229110, ಅಬಕಾರಿ ನಿರೀಕ್ಷಕರು, ಮಡಿಕೇರಿ ವಲಯ, ಮಡಿಕೇರಿ ಮೊ.ಸಂ.9449597139, ಅಬಕಾರಿ ಉಪ ಅಧೀಕ್ಷಕರು, ಮಡಿಕೇರಿ ಉಪ ವಿಭಾಗ, ಮಡಿಕೇರಿ ಮೊ.ಸಂ.9449597137, ಅಬಕಾರಿ ನಿರೀಕ್ಷಕರು, ಸೋಮವಾರಪೇಟೆ ವಲಯ, ಸೋಮವಾರಪೇಟೆ ಮೊ.ಸಂ.7619297765, ಅಬಕಾರಿ ಉಪ ಅಧೀಕ್ಷಕರು, ಸೋಮವಾರಪೇಟೆ ಉಪ ವಿಭಾಗ, ಸೋಮವಾರಪೇಟೆ ಮೊ.ಸಂ.9449252456, ಅಬಕಾರಿ ನಿರೀಕ್ಷಕರು, ವಿರಾಜಪೇಟೆ ವಲಯ, ವಿರಾಜಪೇಟೆ ಮೊ.ಸಂ.9449597141 ಹಾಗೂ ಅಬಕಾರಿ ಉಪ ಅಧೀಕ್ಷಕರು, ವಿರಾಜಪೇಟೆ ಉಪ ವಿಭಾಗ, ವಿರಾಜಪೇಟೆ ಮೊ.ಸಂ.9448879969 ನ್ನು ಸಂಪರ್ಕಿಸಬಹುದು ಎಂದು ಅಬಕಾರಿ ಉಪ ಆಯುಕ್ತರು ಜಗದೀಶ್ ನಾಯಕ್ ತಿಳಿಸಿದ್ದಾರೆ.









